Kannada NewsKarnataka News

 ಹಿತಚಿಂತಕರ ಅಭಿಯಾನ ಮತ್ತು ಹನುಮಮಾಲಾ ಕಾರ್ಯಕ್ರಮ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಶ್ವ ಹಿಂದೂ ಪರಿಷತ್, ಭಜರಂಗ ದಳದತಹ ರಾಷ್ಟ್ರೀಯ ಸಂಘಟನೆಗಳಿಂದ ಮಾತ್ರ ಮಠ ಮಂದಿರಗಳ ರಕ್ಷಣೆಗೆ ಸಾಧ್ಯ ಎಂದು ನೀಲಜಿ ಧ್ಯಾನ ಕೇಂದ್ರದ ಶೃದ್ಧಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಇಂದು, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ಹಿತಚಿಂತಕರ ಅಭಿಯಾನ ಮತ್ತು ಹನುಮಮಾಲಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದೂಗಳು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ರಾಮಮಂದಿರದಂತಹ ನೂರು ವಿಜಯ ಸಾಧಿಸಲು ಸಾಧ್ಯವಿದೆ ಎಂದೂ ಅವರು ಹೇಳಿದರು.
 ರುದ್ರಕೇಸರಿ ಸ್ವಾಮಿಗಳು ಮಾತನಾಡಿ, ಸಾಧು ಸಂತರು ವಿಶ್ವಹಿದೂಪರಿಷತ್ ನ ಭಾಗವಾಗಿ ಕೆಲಸ ಮಾಡಿದರೆ ಹಿಂದೂ ಸಮಾಜ ಸಂಘಟಿತವಾಗಲು ಅನುಕೂಲವಾಗಲಿದೆ ಎಂದು ತಿಳಿಸಿದರು.
 ಭಾವುಕಣ್ಣಾ ಲೋಹಾರ್ ಮಾತನಾಡಿ,  ಸದೃಢ  ಸಮಾಜದ ನಿರ್ಮಾಣ ನಮ್ಮ ಗುರಿ. ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು ಎಂದರು.
ಪ್ರಾಸ್ತಾವಿಕವಾಗಿ ಕೃಷ್ಣ ಭಟ್  ಮಾತನಾಡಿ, ಹಿತಚಿಂತಕ ಮತ್ತು ಹನುಮಮಾಲೆಯ ಬಗ್ಗೆ ಮಾಹಿತಿ ನೀಡಿದರು.
ಹೇಮಂತ  ಹಾವಳ ವಂದಿಸಿದರು. ಗಜಾನನ ಬೀರ್ಜೆ ಜಯ ಘೋಷಣೆ ಹೇಳಿದರು.
ವೇದಿಕೆಯ ಮೇಲೆ ವಿಜಯ ಜಾಧವ,  ಆನಂದ ಕರಲಿಂಗಣ್ಣವರ,  ಬಸವರಾಜ ಹಳಿಂಗಲಿ, ಆದಿನಾಥ ಗಾವಡೆ ಉಪಸ್ಥಿತರಿದ್ದರು.

Related Articles

Back to top button