Kannada NewsKarnataka NewsLatest

*ನಮ್ಮ ಅತ್ತೆ ಬೇಗ ಸಾಯಲಿ ಸ್ವಾಮೀ… ಎಂದು ಹರಕೆ ಹೊತ್ತು ಹುಂಡಿಗೆ ಕಾಣಿಕೆ; ವಿಚಿತ್ರ ಬೇಡಿಕೆ ಹೊತ್ತಿದ್ದಾದರೂ ಯಾರು?*

ಪ್ರಗತಿವಾಹಿನಿ ಸುದ್ದಿ: ತನ್ನ ಅತ್ತೆ ಬೇಗನೇ ಸಾಯಲಿ ಎಂದು ದೇವರಲ್ಲಿ ಹರಕೆ ಹೊತ್ತು ಹುಂಡಿಗೆ ಕಾಣಿಕೆ ಹಾಕಿರುವ ವಿಚಿತ್ರ ಘಟನೆ ಕಲ್ಬುರ್ಗಿ ಜಿಲ್ಲೆಯ ಗಣಗಾಪುರ ಕ್ಷೇತ್ರದಲ್ಲಿ ನಡೆದಿದೆ.

ಈ ರೀತಿ ಹರಕೆ ಹೋರುವವರೂ ಇರುತ್ತಾರೆಯೇ? ಎಂದನಿಸದಿರದು ಆದರೆ ಇಂತದ್ದೊಂದು ಘಟನೆಗೆ ಸಾಕ್ಷಿಯಾಗಿದೆ 50 ರೂಪಾಯಿ ನೋಟಿನ ಮೇಲಿನ ಈ ಬರಹ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದ ವೇಳೆ ಈ ನೋಟು ಪತ್ತೆಯಾಗಿದೆ.

ಇತ್ತೀಚೆಗೆ ಗಾಣಗಾಪುರ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ 50 ರೂಪಾಯಿ ಮೇಲೆ ವಿಚಿತ್ರ ಹರಕೆಯ ಬರಹಗಳನ್ನು ಕಂಡು ಸಿಬ್ಬಂದಿಗಳು ಇದೆಂಥಹ ಹರಕೆ ದೇವರೇ ಎಂದು ಅಚ್ಚರಿಗೊಂಡಿದ್ದಾರೆ. ಅತ್ತೆಗೆ ಒಳ್ಳೆಯ ಬುದ್ಧಿಕೊಡು, ತೊಂದರೆ ಕೊಡುವುದನ್ನು ನಿಲ್ಲಿಸಲಿ, ಆಸ್ತಿ ತನ್ನ ಹೆಸರಿಗೆ ಬರೆಯಲಿ ಈ ರೀತಿ ಹರಕೆ ಹೊರುವುದನ್ನು ನೋಡಿರುತ್ತೇವೆ ಆದರೆ ಅತ್ತೆಯೇ ಸಾಯಲಿ ಎಂದು ಹರಕೆ ಹೊತ್ತು ಕಾಣಿಕೆ ಹಾಕಿರುವುದು ವಿಪರ್ಯಾಸ.

50 ರೂಪಾಯಿ ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ…ಎಂದು ಬರೆದು ದೇವರ ಕಾಣಿಕೆ ಹುಂಡಿಗೆ ಹಾಕಲಾಗಿದೆ. ಆದರೆ ನೋಟಿನ ಮೇಲೆ ಯಾವುದೇ ಹೆಸರಿನ ಉಲ್ಲೇಖವಿಲ್ಲ. ಹಾಗಾಗಿ ಹೀಗೆ ಬರೆದು ದೇವರಿಗೆ ಹರಕೆ ಹೊತ್ತಿರುವುದು ಸೊಸೆಯೊಬ್ಬಳ ಕೆಲಸವೋ ಅಥವಾ ಅಳಿಯನೊಬ್ಬನ ಕೆಲಸವೋ ಎಂಬುದು ಸ್ಪಷ್ಟವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ 50 ರೂಪಾಯಿ ಮುಖಬೆಲೆಯ ನೋಟು ಮಾತ್ರ ವೈರಲ್ ಆಗಿದೆ.

Home add -Advt

Related Articles

Back to top button