Latest

ಚೀನಾ ಆ್ಯಪ್‌ಗಳ ಬ್ಯಾನ್; ಸಮಸ್ಯೆ ಕಗ್ಗಂಟಾಗಲಿದೆ ಎಂದ ವಿದೇಶಾಂಗ ವಕ್ತಾರ ಜಾವೋ ಲಿಜಿಯಾನ್

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಯೋಧರ ನಡುವೆ ನಡೆದ ಸಂಘರ್ಷದ ಬಳಿಕ ಚೀನಾ ಉತ್ಪನ್ನಗಳನ್ನು ಭಾರತ ಸರ್ಕಾರ ನಿಷೇಧಿಸಿದ್ದು, 59 ಚೀನಾ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದೆ.

ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಭಾರತದಾದ್ಯಂತ ಬೆಂಬಲ ವ್ಯಕ್ತವಾಗಿದ್ದು, ಚೀನಾದ ವಸ್ತುಗಳ ಆಮದು ಮತ್ತು ಬಳಕೆ ಮೇಲೂ ಸಂಪೂರ್ಣವಾಗಿ ನಿಷೇಧ ಹೇರುವಂತೆ ಒತ್ತಾಯ ಕೇಳಿ ಬಂದಿದೆ.

ಈ ನಡುವೆ 59 ಚೀನಾ ಆ್ಯಪ್‌ಗಳನ್ನು ನಿಷೇಧಿಸಿರುವ ಭಾರತದ ನಡೆಯನ್ನು ತೀವ್ರ ಕಳವಳಕಾರಿ ಎಂದಿರುವ ಚೀನಾ, ಇಂತಹ ಆಕ್ರಮಣಕಾರಿ ನೀತಿಗಳಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, ಭಾರತದ ನಡೆಯನ್ನು ದುರದೃಷ್ಟಕರ ಎಂದಿದ್ದಾರೆ.

Home add -Advt

ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನು-ನಿಬಂಧನೆಗಳನ್ನು ಪಾಲಿಸುವಂತೆ ಚೀನಿ ಕಂಪನಿಗಳಿಗೆ ನಾವು ಯಾವಾಗಲೂ ಸ್ಪಷ್ಟ ಸೂಚನೆಯನ್ನು ನೀಡಿರುತ್ತೇವೆ. ಯಾವುದೇ ಕಾರಣಕ್ಕೂ ಸ್ಥಳೀಯ ಕಾನೂನನ್ನು ಅಗೌರವಿಸುವ ಪ್ರಶ್ನೆಯೇ ಇಲ್ಲ. ಅದರಂತೆ ಚೀನಾವೂ ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನಾತ್ನಕ ಹಕ್ಕುಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿ ಭಾರತದ ಮೇಲಿದ್ದು, ಈಗ ಕೈಗೊಂಡಿರುವ 59 ಚೀನಾ ಆ್ಯಪ್‌ಗಳ ಮೇಲಿನ ನಿಷೇಧದ ತೀರ್ಮಾನವನ್ನು ಭಾರತ ಮರುಪರಿಶೀಲಿಸಬೇಕು ಎಂದು ಹೇಳಿದರು.

Related Articles

Back to top button