
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಚಿಕ್ಕೋಡಿಯಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಬೇಕೆಂದು ನಿರಂತರವಾಗಿ ಬೆನ್ನತ್ತಿರುವ ಚಿಕ್ಕೋಡಿ- ಸದಲಗಾ ಶಾಸಕ ಗಣೇಶ ಹುಕ್ಕೇರಿ, ಗುರುವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡಿದರು.

ಚಿಕ್ಕೋಡಿಯಲ್ಲಿ ಲ್ಯಾಬ್ ಸ್ಥಾಪಿಸುವಂತೆ ಸಾಕಷ್ಟು ದಿನದಿಂದ ನಾನು ಕೋರುತ್ತಿದ್ದೇನೆ. ಈ ಹಿಂದೆ ತಮಗೂ ಪತ್ರ ಬರೆದಿದ್ದೆ. ದೂರವಾಣಿಯಲ್ಲೂ ಮಾತನಾಡಿದ್ದೆ. ತಾವು ಲ್ಯಾಬ್ ಸ್ಥಾಪಿಸಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಿರಿ. ಆದರೆ ಈವರೆಗೂ ಈ ಬಗ್ಗೆ ಕ್ರಮವಾಗಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದರು.