
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ,
ರಾಜ್ಯಮಟ್ಟದ ಪಠ್ಯಕ್ರಮ ಹೊಂದಿರುವ 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆ ಮಾರ್ಚ್ 27ರಿಂದ ಆರಂಭಿಸಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ಪ್ರಕಟಗೊಂಡಿದೆ.
5ನೇ ತರಗತಿಗೆ ಮಾರ್ಚ್ 27ರಿಂದ ಮಾರ್ಚ್ 30ರವರೆಗೆ ಹಾಗೂ 8ನೇ ತರಗತಿಗೆ ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆ ನಡೆಯಲಿದೆ.
5ನೇ ತರಗತಿ ವೇಳಾಪಟ್ಟಿ:
ಮಾರ್ಚ್ 27 – ಪ್ರಥಮ ಭಾಷೆ
ಮಾರ್ಚ್ 28 – ದ್ವಿತೀಯ ಭಾಷೆ
ಮಾರ್ಚ್ 29 – ಪರಿಸರ ಅಧ್ಯಯನ
ಮಾರ್ಚ್ 30 – ಗಣಿತ
8ನೇ ತರಗತಿ ವೇಳಾಪಟ್ಟಿ:
ಮಾರ್ಚ್ 27 -ಪ್ರಥಮ ಭಾಷೆ
ಮಾರ್ಚ್ 28- ದ್ವಿತೀಯ ಭಾಷೆ
ಮಾರ್ಚ್ 29 – ತೃತೀಯ ಭಾಷೆ
ಮಾರ್ಚ್ 30 – ಗಣಿತ
ಮಾರ್ಚ್ 31 ವಿಜ್ಞಾನ
ಏಪ್ರಿಲ್ 1 – ಸಮಾಜ ವಿಜ್ಞಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ