Kannada NewsLatest

ಮಾರಿಹಾಳ ಪೊಲೀಸ್‌ರಿಂದ  6 ಮನೆಗಳ್ಳರ ಬಂಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

6 ಜನ ಮನೆಗಳ್ಳರನ್ನು ಬಂಧಿಸಿರುವ ಮಾರಿಹಾಳ ಠಾಣೆ ಪೊಲೀಸರು ಅವರಿಂದ 6.68 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

   ಮಾರಿಹಾಳ ಠಾಣೆಯ ಪೊಲೀಸ್ ಇನ್ಸಪೆಕ್ಟರ್    ವಿಜಯಕುಮಾರ ಎನ್. ಸಿನ್ನೂರ ಹಾಗೂ ಅವರ ಅಧೀನ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು. 

  ಮಾರಿಹಾಳ ಠಾಣಾ  ವ್ಯಾಪ್ತಿಯ ತುಮ್ಮರಗುದ್ದಿ ಗ್ರಾಮದಲ್ಲಿ ಕಳೆದ ಫೆ.5 ಮತ್ತು 6ರ ಮಧ್ಯೆ  ಯಲ್ಲಪ್ಪ ಭೀಮಪ್ಪ ಸುಲಧಾಲ ಸಾ: ತುಮ್ಮರಗುದ್ದಿ ಇವರ ಮನೆಯ ಬಾಗಿಲ ಕೀಲಿಯನ್ನು ಮುರಿದು ಮನೆಯಲ್ಲಿ ಇದ್ದ ಟ್ರೇಜರಿಯಲ್ಲಿಟ್ಟ 41 ಗ್ರಾಂ. ಬಂಗಾರದ ಆಭರಣ ಮತ್ತು  3 ಲಕ್ಷ ರೂಪಾಯಿಗಳನ್ನು  ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಕಳೆದ ಫೆಬ್ರವರಿ 8ರಂದು ನೀಡಿದ ದೂರಿನನ್ವಯ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. 

ತುಮ್ಮರಗುದ್ದಿಯ ಬಸವರಾಜ ಕಲ್ಲಪ್ಪ ಹೊಸೂರಿ, (೨೪ ವರ್ಷ) ,  ಮಹೇಶ ಬಾಳಪ್ಪ ಶಿಣಗಿ, (೧೯ ವರ್ಷ),  ಮಹಾಂತೇಶ ಲಕ್ಕಪ್ಪ ಶಿಣಗಿ, (೨೬ ವರ್ಷ), ಯಲ್ಲಪ್ಪ @ ಪಪ್ಪು ಮಲ್ಲಿಕಾರ್ಜುನ ನಾಯಿಕ, (೨೪ ವರ್ಷ),   ಭೀಮಶಿ ಲಕ್ಷ್ಮಣ ಮುತ್ತೆನ್ನವರ, (೧೯ ವರ್ಷ),  ಕಮಲೇಶ ಮಲ್ಲಪ್ಪ ಗೋಸಾವಿ, (೧೯ ವರ್ಷ)  ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡರು.

 ಅವರಿಂದ ರೂ. 4.62 ಲಕ್ಷ ರೂ. ಮೌಲ್ಯದ 146 ಗ್ರಾಂ ಬಂಗಾರದ ಆಭರಣ ಹಾಗೂ ರೂ.2.06 ಲಕ್ಷ ರೂ ನಗದು ಹಣವನ್ನು ವಶಪಡಿಸಿಕೊಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  

 ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಮಾರಿಹಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ವಿಜಯ ಕುಮಾರ ಸಿನ್ನೂರ ಹಾಗೂ ಅವರ ತಂಡದ  ಬಿ. ಎಸ್. ನಾವಲಗಿ ಎಎಸ್‌ಐ,   ಬಿ. ಎಸ್. ನಾಯಿಕ,  ಬಿ. ಬಿ. ಕಡ್ಡಿ,  ಎ. ಎಮ್. ಜಮಖಂಡಿ,  ಎಚ್. ಎಲ್. ಯರಗುದ್ರಿ,  ಎಮ್. ಆರ್. ಸುಲದಾಳ,  ಎಸ್. ಎಲ್. ಪಾಟೀಲ ಅವರ ಈ ಕಾರ್ಯವನ್ನು  ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ. 

         

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button