LatestNational

*ನೀರೆಂದು ಭಾವಿಸಿ ಆಸಿಡ್ ಕುಡಿದ ಮಗು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬಾಯಾರಿಕೆಗೆ ಮಗುವೊಂದು ನೀರೆಂದು ತಪ್ಪಾಗಿ ತಿಳಿದು ಆಸಿಡ್ ಕುಡಿದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಬಂಗಾಂಗ ಪ್ರದೇಶದಲ್ಲಿ ವಾಸವಾಗಿದ್ದ ಕೈಲಾಸ್ ಅಹಿರ್ವಾರ್ ಅವರ 6 ವರ್ಷದ ಮಗು ನೀರೆಂದು ಆಸಿಡ್ ಕುಡಿದಿದ್ದು, ಮಗು ಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವಾರಕ್ಕೂ ಹೆಚ್ಚು ದಿನ ಮಗುವಿಗೆ ಚಿಕಿತ್ಸೆ ನೀಡಿದರೂ ಬದುಕಿಸಲು ಸಾಧ್ಯವಾಗಿಲ್ಲ. 6 ವರ್ಷದ ಮಖಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮನೆ ಸ್ವಚ್ಛಗೊಳಿಸಲೆಂದು ಕೈಲಾಶ್ ಆಸಿಡ್ ತಂದು ಇಟ್ಟಿದ್ದರು. ಮೇ 5ರಂದು ರಾತ್ರಿ ತಂದೆಯ ಪಕ್ಕದಲ್ಲಿ ಮಲಗಿದ್ದ ಮಗುವಿಗೆ ಮಧ್ಯರಾತ್ರಿ ಬಾಯಾರಿಕೆಯಾಗಿದೆ. ಈ ವೇಳೆ ತಂದೆ ಕೈಲಾಶ್ ನೀರು ಕೊಟ್ಟಿದ್ದರು. ಬಳಿಕ ಮಗು ತಾಯಿ ಬಳಿ ಹೋಗಿ ಮಲಗಿದೆ. ಬಳಿಕ ಸುಮಾರು 1:30ರ ವೇಳೆ ಮತ್ತೆ ಎದ್ದ ಮಗು ಬಾಯಾರಿಕೆಯಾಗುತ್ತಿದೆ ಎಂದು ಕೂಲರ್ ಬಳಿ ಇಟ್ಟಿದ್ದ ಆಸಿಡ್ ಬಾಟಲಿಯನ್ನು ನೀರೆಂದು ತಿಳಿದು ಸೇವಿಸಿದೆ. ಕೆಲ ಹೊತ್ತಲ್ಲೇ ಮಗು ಗಂಟಲು ಉರಿ ಎಂದು ಅಳಲಾರಂಭಿಸಿದೆ. ವಾಂತಿ ಮಾಡಿಕೊಂಡಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗು ಇಂದು ಕೊನೆಯುಸಿರೆಳೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button