Latest

ಶಿವಸೇನೆ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರದ ಶಿವಸೇನೆ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ ದೇವನೆ ಗುರುವಾರದಂದು  ಹೇಳಿರುವ ಹೇಳಿಕೆ ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಹಾನಗರ ಪಾಲಿಕೆ ಮೇಲೆ ಹಾಕಿರುವ ಕನ್ನಡ ಧ್ವಜ  ತೆಗೆದು ಬಗವಾಧ್ವಜ  ಹಾಕುತ್ತೇವೆ ಎಂದು ಹೇಳಿರುವ ಶಿವಸೇನೆ, ಎಂಇಎಸ್ ಹೇಳಿಕೆ  ಕನ್ನಡಿಗರನ್ನು ಕೆರಳಿಸುತ್ತಿದೆ. ಎಂಇಎಸ್ ನಡೆ ಖಂಡಿಸಿ ಬೆಳಗಾವಿಯಲ್ಲಿ ಸೋಮವಾರ ರ್ಯಾಲಿ ನಡೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ್ ಬುರ್ಲಿ ಹೇಳಿದ್ದಾರೆ.

ಬೆಳಗಾವಿಯ ಜಿಲ್ಲಾಡಳಿತ ಎಂಇಎಸ್ ನಾಡ ದ್ರೋಹಿಗಳಿಗೆ ಬೆಳಗಾವಿಯಲ್ಲಿ ಅನುಮತಿ ನೀಡಿದ್ದರೆ ಕನ್ನಡಿಗರು ಸುಮ್ಮನೆ ಕೂಡುವುದಿಲ್ಲ ಮರಾಠಿಗರು ಕನ್ನಡಿಗರು ಒಳ್ಳೆಯ ಬಾಂಧವ್ಯದಿಂದ ಇದ್ದೆವೆ ಆದರೆ ಬೆಳಗಾವಿಯಲ್ಲಿ ಮರಾಠಿಗರಿಗೆ ಹಾಗೂ ಕನ್ನಡಿಗರಿಗೆ ಜಗಳ ಹಚ್ಚುವ ಕೆಲಸ ನಾಡ ದ್ರೋಹಿಗಳು ಮಾಡುತ್ತಿದ್ದು ಅದಕ್ಕಾಗಿ ಒಂದು ವೇಳೆ ನಮ್ಮ ಬೆಳಗಾವಿಯಲ್ಲಿ ಶಿವಸೇನೆಯ ಮುಖಂಡರುಗಳಿಗೆ ಏನಾದರೂ ಅನುಮತಿ ನೀಡಿದ್ದರೆ ಬರುವಂತ ದಿವಸದಲ್ಲಿ ನಾವು ಮರಾಠಿ ಬೋರ್ಡುಗಳಿಗೆ ಹಾಗೂ ಮಹಾರಾಷ್ಟ್ರ ಬಸ್ ಗಳಿಗೆ ನಾವು ಬೆಂಕಿ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾ ಅಧ್ಯಕ್ಷ ಬಾಳಪ್ಪಾ ಗುಡಗೇನಟ್ಟಿ ಮಾತನಾಡಿ, ಬೆಳಗಾವಿಯಲ್ಲಿ ಒಂದು ವೇಳೆ ಸೋಮವಾರ ಮರಾಠಿ ಹಾಗೂ ಎಂಇಎಸ್ ಶಿವಸೇನೆಯ ರ್ಯಾಲಿ ನಡೆಸುತ್ತೇವೆ ಎಂದು ಹೇಳಿರುವ ರ್ಯಾಲಿಗೆ ಜಿಲ್ಲಾಡಳಿತ ಏನಾದರೂ ಅನುಮತಿ ನೀಡಿದ್ದರೆ ಅವರಿಗೆ ಬೆಳಗಾವಿಯಲ್ಲಿ ಕನ್ನಡಿಗರು ಸುಮ್ಮನಿರುವುದಿಲ್ಲ ಬೆಳಗಾವಿಯಲ್ಲಿ ಶಿವಸೇನೆ ಎಂಇಎಸ್ ಮುಖಂಡರುಗಳನ್ನು ಗಡಿಪಾರು ಮಾಡಿ ಶಾಂತಿ ಕಾಪಾಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

Home add -Advt

Related Articles

Back to top button