Latest

60 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 

40 ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯಿಂದ ಕೂಲಿ ಹುಡುಕಿಕೊಂಡು ಬಂದು ಅಲತಗಾ ಗ್ರಾಮದಲ್ಲಿ ಗುಡಿಸಲುವಾಸಿಗಳಾಗಿ ಖಡಿ ಕ್ವಾರಿಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 60 ಕುಟುಂಬಗಳಿಗೆ ಅರಣ್ಯ, ಜೈವಿಕ ಹಾಗೂ ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಿದರು.

ಅಲತಗಾ ಗ್ರಾಮದ ನಿವಾಸಿಗಳಿಗೆ  ಶಾಲೆ, ಅಂಗನವಾಡಿ, ಆಸ್ಪತ್ರೆ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಕೊಡಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಮೂಲಸೌಕರ್ಯಗಳಿಲ್ಲದೇ 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ 2008 ರಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಲ್ಲದೇ  ಮಾರ್ಕಂಡೇಯ ನದಿಯಿಂದ ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಮಾಡಿರುವುದನ್ನೂ ಅವರು ನೆನಪಿಸಿಕೊಂಡರು.

ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಸದ್ಯ ಸಿಕ್ಕಿರುವ ನಿವೇಶನಗಳು ಅತಿಕ್ರಮಣವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕೆಂದೂ ಅವರು ಸಲಹೆ ಮಾಡಿದರು.

ಬೆಳಗಾವಿ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ತಹಸೀಲ್ದಾರ್ ಮಂಜುಳಾ ನಾಯಿಕ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪದ್ಮಜಾ ಪಾಟೀಲ, ಗ್ರಾಮಸ್ಥರಾದ ಲಗಮಾ ಮಲ್ಲಹೋಳಿ, ಸಿದ್ದಪ್ಪ ಮಾಳಗಿ, ಉಮೇಶ ದಾದನಟ್ಟಿ, ರಾಮು ರಾಠೋಡ, ಭೀಮಶಿ ಚೌವ್ಹಾಣ, ರಾಹುಲ್ ಜಾಧವ ಮತ್ತು ಇತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button