ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಎಸ್ ಪಿ ಡಾ. ಸಂಜೀವ ಪಾಟೀಲ್ ಅವರು ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸುವ ಸಲುವಾಗಿ ನಡೆಸುತ್ತ ಬಂದಿರುವ ಫೋನ್ ಇನ್ ಕಾರ್ಯಕ್ರಮಕ್ಕೆ ಅಮೋಘ ಸ್ಪಂದನೆ ವ್ಯಕ್ತವಾಗುತ್ತಿದೆ. ಎರಡೇ ಗಂಟೆಯಲ್ಲಿ 50ಕ್ಕೂ ಹೆಚ್ಚು ಜನರ ಸಮಸ್ಯೆ ಆಲಿಸಲು ಈ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿದೆ.
ಡಿ.24ರಂದು ಹಮ್ಮಿಕೊಂಡ ಫೋನ್ ಇನ್ ಕಾರ್ಯಕ್ರಮಕ್ಕೆ ಜಿಲ್ಲೆಯಾಧ್ಯಂತ ಒಟ್ಟು 62 ಜನ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಯಾವ್ಯಾವ ದೂರು ?
ಅಕ್ರಮ ಸಾರಾಯಿ ಮಾರಾಟ ನಿಲ್ಲಿಸುವಂತೆ, ಸಂಚಾರ ದಟ್ಟಣೆ ನಿಯಂತ್ರಣ, ಸೇತುವೆ ಮೇಲೆ ಭಾರಿ ವಾಹನ ಸಂಚಾರ, ದನದ ಸಂತೆ ಪ್ರಾರಂಭಿಸುವ ಬಗ್ಗೆ, ಶಾಲೆಯಲ್ಲಿ ಸಿಸಿ ಟಿವಿ ಅಳವಡಿಕೆ ಮೊದಲಾಗಿ ದೂರುಗಳು ಜನರಿಂದ ಬಂದಿವೆ.
ಹಾರೂಗೇರಿಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಸೌಜನ್ಯದಿಂದ ವರ್ತಿಸಲು ಕ್ರಮ ವಹಿಸುವಂತೆಯೂ ವಿನಂತಿಸಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಎಲ್ಲ ಕರೆಗಳಿಗೂ ಸಮಾಧಾನದಿಂದ ಉತ್ತರ ನೀಡಿದ ಎಸ್‍ಪಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲಗಳ ಅಧಿವೇಶನ ನಡೆಯುತ್ತಿದ್ದು, ಅದರ ಬಂದೋಬಸ್ತ್ ಜವಾಬ್ದಾರಿಯ ಒತ್ತಡದ ನಡುವೆಯೂ ಎಸ್‍ಪಿ ಡಾ. ಸಂಜೀವ ಪಾಟೀಲ್ ಕರ್ತವ್ಯ ಪ್ರಜ್ಞೆ ಮೆರೆದು ಫೋನ್ ಇನ್ ಕಾರ್ಯಕ್ರಮ ತಪ್ಪದೇ ಮುಂದುವರೆಸಿದ್ದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.
ವಿಶ್ವದ ಅತಿ ದೊಡ್ಡ ಕೋವಿಡ್ ಆಕ್ರಮಣ; ಒಂದೇ ದಿನದಲ್ಲಿ 3.7 ಕೋಟಿ ಜನರಿಗೆ ಸೋಂಕು
https://pragati.taskdun.com/worlds-largest-covid-outbreak-3-7-crore-people-were-infected-in-a-single-day/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ