Latest

ಹೆಲಿಕಾಪ್ಟರ್ ಪತನ ಪ್ರಕರಣ; 7 ಮೃತದೇಹಗಳು ಪತ್ತೆ

ಪ್ರಗತಿವಾಹಿನಿ ಸುದ್ದಿ; ರೋಮ್: ಎರಡು ದಿನಗಳ ಹಿಂದೆ ಇಟಲಿಯಲ್ಲಿ ಹೆಲಿಕಾಪ್ಟರ್ ಪತನಗೊಂಡ ಪ್ರಕರಣ ಸಂಬಂಧ ಇದೀಗ 7 ಮೃತದೇಹಗಳು ಪತ್ತೆಯಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ.

ರಾಡರ್ ಸಂಪರ್ಕ ಕಳೆದುಕೊಂಡು ಕಣ್ಮರೆಯಾಗಿದ್ದ ಹೆಲಿಕಾಪ್ಟರ್ ಎರಡು ದಿನಗಳ ಹಿಂದೆ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿನ ಪರ್ವತ ಪ್ರದೇಶದಲ್ಲಿ ಪತನಗೊಂಡಿತ್ತು. ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್ ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಹವಾಮಾನ ವೈಪರಿತ್ಯದಿಂದಾಗಿ ದುರಂತಕ್ಕೀಡಾಗಿತ್ತು ಎಂದು ತಿಳಿದುಬಂದಿದೆ.

Home add -Advt

ಇದೀಗ ಪತನಗೊಂಡಿದ್ದ ವಿಮಾನದಿಂದ 7 ಮೃತದೇಹ ಹೊರತೆಗೆಯಲಾಗಿದ್ದು, ಮೃತರು ನಾಲ್ವರು ಟರ್ಕಿ ಮೂಲದವರು ಇಬ್ಬರು ಲೆಬನಾನಿ, ಓರ್ವ ಇಟಲಿ ಪೈಲಟ್ ಆಗಿದ್ದಾರೆ.
ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ್ದ ಪ್ರಕರಣ; ಮೂವರು ವಶಕ್ಕೆ

Related Articles

Back to top button