ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಿಬಿಯಾದಿಂದ ಭಾರತಕ್ಕೆ ಹೊರಟಿದ್ದ 7 ಭಾರತೀಯರ ಅಪಹರಣವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶ, ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮೂಲದ 7 ಮಂದಿ ಭಾರತೀಯರು ಸೆಪ್ಟೆಂಬರ್ 14ರಂದು ಭಾರತಕ್ಕೆ ಮರಳಲು ತ್ರಿಪೋಲಿ ಏರ್ಪೋರ್ಟ್ಗೆ ತೆರಳುತ್ತಿದ್ದರು. ಲಿಬಿಯಾದ ಆಶ್ವೆರಿಫ್ ಎಂಬ ಸ್ಥಳದಿಂದ 7 ಭಾರತೀಯರನ್ನು ಅಪಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಲಿಬಿಯಾದಲ್ಲಿ ಅಪಹರಣಕ್ಕೊಳಗಾದ ಭಾರತೀಯರು ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಅಧಿಕಾರಿಗಳು ಈಗಾಗಲೇ ಅಪಹರಣಕಾರ ಜೊತೆ ಮಾತನಾಡಿದ್ದು, ಅಪಹರಣಕಾರರು ಕಳುಹಿಸಿರುವ ಫೋಟೋಗಳ ಮೂಲಕ 7 ಭಾರತೀಯರು ಸುರಕ್ಷಿತವಾಗಿರುವುದು ಖಚಿತವಾಗಿದೆ. 7 ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಕೂಡ ಭಾರತ ಕೂಡ ಕಾರ್ಯೋನ್ಮುಖವಾಗಿದ್ದು, ಲಿಬಿಯಾದ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಸಿದೆ ಎಂದು ಅನುರಾಗ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ