Belagavi NewsBelgaum NewsKarnataka NewsLatest

*ನೀರಿನ ಟ್ಯಾಂಕ್ ಬಳಿ ಅಕ್ರಮ ಶೆಡ್ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ: ಓರ್ವ ಆರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಸ್ಥಳದಲ್ಲಿ ಇದ್ದ ನೀರಿನ ಟ್ಯಾಂಕ್ ಬಳಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ ಮದ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ ಭೂಪನನ್ನು ಬೆಳಗಾವಿ ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

Home add -Advt

ಕೈಲಾಸನಗರದ ಸಿದ್ದಪ್ಪ ಭೀಮಪ್ಪ ಹಣಬರಟ್ಟಿ ಬಂಧಿತ ಆರೋಪಿ. ಸ್ವಂತ ಲಾಭಕ್ಕಾಗಿ ಕೈಲಾಶ ನಗರದ ನೀರಿನ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ
ಯಾವುದೇ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಒಂದು ತಾತ್ಕಾಲಿಕ ಶೆಡ್‌ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ.

ಮಾರಿಹಾಳ ಠಾಣೆ ಎ ಎಸ್ ಐ ಎಂ. ಎಸ್. ರುದ್ರಾಪೂರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮದ್ಯದ ಪ್ಯಾಕೇಟ್ ಗಳನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.


Related Articles

Back to top button