Kannada NewsKarnataka NewsLatest

ಮನೆ ಕುಸಿತಕ್ಕೆ 7 ಜನರ ಬಲಿ: ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ ಶಾಸಕಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಾಲೂಕಿನ ಬಡಾಲ ಅಂಕಲಗಿಯಲ್ಲಿ ಮನೆ ಕುಸಿದು  ಜನರು ಸಾವಿಗೀಡಾಗೀಡಾಗಿದ್ದಾರೆ. ಸ್ಥಳದಲ್ಲಿ ಐವರು ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಯ ಗೋಡೆ ಕುಸಿದಿದೆ. ಇದರಿಂದಾಗಿ ಅವಶೇಷಗಳಡಿ ಸಿಲುಕಿ ಐವರು ಸಾವಿಗೀಡಾಗಿದ್ದಾರೆ. ಮೂವರನ್ನು  ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಅರ್ಜುನ ಖನಗಾವಿ (45), ಸತ್ತೆವ್ವ ಖನಗಾವಿ (45), ಗಂಗವ್ವ ಭೀಮಪ್ಪ ಖನಗಾವಿ (50), ಸವಿತಾ ಭೀಮಪ್ಪ ಖನಗಾವಿ (28), ಲಕ್ಷ್ಮಿ ಅರ್ಜುನ ಖನಗಾವಿ (15), ಪೂಜಾ ಅರ್ಜುನ ಖನಗಾವಿ (8 ವರ್ಷ) ಹಾಗೂ ಪಕ್ಕದ ಮನೆಯ ಕಾಶವ್ವ ವಿಠ್ಠಲ ಕೊಲ್ಯಪ್ಪನವರ್ (8) ಮೃತರು. 

ಮನೆಯ ಯಜಮಾನ ಭೀಮಪ್ಪ ಮಾತ್ರ ಬದುಕುಳಿದಿದ್ದಾನೆ.

ಹಿರೇಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಅವರದ್ದೇ ಒಡೆತನಕ್ಕೆ ಸೇರಿದ ಅಂಬುಲೆನ್ಸ್ ಜೊತೆಗೆ  ಸ್ಥಳಕ್ಕೆ ತೆರಳಿದ್ದಾರೆ. ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿದಿದ್ದು, ಪೂರ್ಣ ವಿವರ ಇನ್ನಷ್ಟ ಬರಬೇಕಿದೆ.

ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಂಡ ಶಾಸಕಿ; ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಹಾಸ್ಟೇಲ್ ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button