ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಬಂಧಿತರಾಗಿದ್ದ ಎಫ್ ಡಿಐ ಹಾಗೂ ಎಸ್ ಡಿಪಿಐ 7 ಕಾರ್ಯಕರ್ತರಿಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಬೆಳಗಾವಿ ಹಿಂಡಲಗಾ ಜೈಲು ಸೇರಿದ್ದ 7 ಜನ ಪಿಎಫ್ ಐ ಹಾಗೂ ಎಸ್ ಡಿ ಪಿಐ ಕಾರ್ಯಕರ್ತರಿಗೆ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಬಂಧಿತ ಕಾರ್ಯಕರ್ತರಿಂದ ತಲಾ 50 ಸಾವಿರ ಬಾಂಡ್ ಪಡೆದು ಷರತ್ತುಗಳನ್ನು ಹಾಕಿ ಡಿಸಿಪಿ ರವೀದ್ರ ಗಡಾದಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಆಜಂ ನಗರದ ನಿವಾಸಿ ಪಿಎಫ್ ಐ ಮಾಜಿ ಜಿಲ್ಲಾಧ್ಯಕ್ಷ ಝಕೀರುಲ್ಲಾ ಫೈಜಿ, ಎಸ್ ಡಿ ಪಿಐ ಬೆಳಗಾವಿಜಿಲ್ಲಾಧ್ಯಕ್ಷ ಅಬೀದ್ ಖಾನ್ ಕೊಡೋಲಿ, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಬದ್ರುದ್ದೀನ್ ಪಟೇಲ್, ಅಮನ್ ನಗರ ನಿವಾಸಿ ಸಮೀವುಲ್ಲಾ ಪಿರ್ಜಾದೆ, ಬೆಳಗಾವಿ ಬಾಕ್ಸೈಟ್ ರೋಡ್ ನಿವಾಸಿ ಜಹೀರ್ ಫಿವಾಲೆ ಹಾಗೂ ಬೆಳಗಾವಿ ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್ ಜಾಮೀನು ಪಡೆದುಕೊಂಡಿದ್ದಾರೆ.
ಸೆ.27ರಂದು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಈ 7 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಈಗಲೂ ಹೇಳುತ್ತೇನೆ ನನ್ನ ಮಗನದ್ದು ಸಹಜ ಸಾವಲ್ಲ, ಕೊಲೆ; ಪರೇಶ್ ಮೇಸ್ತ ತಂದೆ ಕಣ್ಣೀರು
https://pragati.taskdun.com/latest/paresh-mesta-casecbi-b-reportfatherreaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ