ಪ್ರಗತಿವಾಹಿನಿ ಸುದ್ದಿ: 7 ವರ್ಷದ ಬಾಲಕಿಯನ್ನು ದುರುಳನೊಬ್ಬ ಅಪಹರಿಸಲು ಯತ್ನಿಸಿರುವ ಘಟನೆ ರಾಮನಗರದ ಚಾಮುಂಡಿಪುರ ಲೇಔಟ್ ನಲ್ಲಿ ನಡೆದಿದೆ.
ಬಾಲಕಿಯ ಕೈ, ಬಾಯಿಗೆ ಟೇಪ್ ಕಟ್ಟಿ ಹೊತ್ತೊಯ್ಯಲು ಯತ್ನಿಸಿದ್ದ. ಈ ವೇಳೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ರಕ್ಷಿಸಲಾಗಿದ್ದು, ಆರೋಪಿ ದರ್ಶನ್ ಎಂಬಾತನನ್ನು ಹಿಡಿದು ಪೊಲಿಸರಿಗೆ ಒಪ್ಪಿಸಲಾಗಿದೆ.
ಬೀಡಿ, ಸಿಗರೇಟ್ ಗಾಗಿ ಆರೋಪಿ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮಗಳು ಮನೆಯಲ್ಲಿ ಕಾಣುತ್ತಿಲ್ಲ ಎಂದು ತಂದೆ ಸಂತೋಷ್ ಹುಡುಕುತ್ತಿದ್ದರು. ಈ ವೇಳೆ ಸ್ಥಳೀಯರು ಗಣೇಶ ಮೂರ್ತಿ ಕೂರಿಸಿದ್ದ ಜಾಗದಲ್ಲಿ ನಿಮ್ಮ ಮಗಳು ಇದ್ದಾಳೆ ಎಂದು ಹೇಳಿದ್ದರು. ತಕ್ಷಣ ಸ್ಥಳಕ್ಕೆ ಬಂದು ನೋಡಿದರೆ ಮಗಳು ಅಲ್ಲಿಯೂ ಇರಲಿಲ್ಲ. ಗಾಬರಿಯಾದ ತಂದೆ ಅಲ್ಲಿದ್ದವರಿಗೆ ಕೇಳಿದ್ದಾರೆ. ಎಲ್ಲರೂ ಬಾಲಕಿಯನ್ನು ಹುಡುಕಿದ್ದಾರೆ. ಬಾಲಕಿ ಕಾಣದಿದ್ದಾಗೆ ಎಲ್ಲರೂ ಆತಂಕಗೊಂಡಿದ್ದಾರೆ.
ಸ್ಥಳದಲ್ಲಿ ಜನರ ಗುಂಪು ಸೇರಿ ಜೋರು ಜೋರು ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಆರೋಪಿ ಬಾಲಕಿಯನ್ನು ಬಿಟ್ಟು ಓಡಿದ್ದಾನೆ. ಕತ್ತಲ ಸ್ಥಳದಲ್ಲಿ ಬಾಲಕಿ ಕೈ, ಬಾಯಿಗೆ ಟೇಪ್ ಕಟ್ಟಿದ ಸ್ಥಿತಿಯಲ್ಲಿ ಬಿದ್ದಿದ್ದಳು. ಬಾಲಕಿಯನ್ನು ರಕ್ಷಿಸಿದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ