Belagavi NewsBelgaum NewsKarnataka News

*BREAKING: ಬೆಳಗಾವಿಯಲ್ಲಿ ಬೀಕರ ಅಪಘಾತ: ವಿದ್ಯಾರ್ಥಿಗಳ ಮೇಲೆ ಹರಿದ ಬಸ್: ಓರ್ವ ಬಾಲಕ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ರಸ್ತೆ ಬಳಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆಯೇ ಸಾರಿಗೆ ಬಸ್ ಹರಿದು ಓರ್ವ ಬಾಲಕ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ.

Home add -Advt

ಸುನೀಲ್ (10) ಮೃತ ಬಾಲಕ. ಆಗತಾನೇ ಟ್ಯೂಷನ್ ಕ್ಲಾಸ್ ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿಗಳು, ರಸ್ತೆ ದಾಟಿ ರಸ್ತೆಬದಿ ನಿಂತಿದ್ದರು. ಈ ವೇಳೆ ಸರ್ಕಾರಿ ಬಸ್ ವೊಂದು ಮಕ್ಕಳ ಮೇಲೆಯೇ ಹರಿದು ಹೋಗಿದೆ. ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಸ್ತೆ ಬದಿ ಮಕ್ಕಳು ನಿಂತಿರುವುದನ್ನು ಕಂಡೂ ನಿರ್ಲಕ್ಷ್ಯದಿಂದ ಚಾಲಕ ಬಸ್ ಓಡಿಸಿದ್ದಾನೆ ಎನ್ನಲಾಗಿದೆ. ಬಸ್ ಚಾಲಕನ ಬೇಜವಾಬ್ದಾರಿ ಚಾಲನೆಗೆ ಬಾಲಕ ಬಲಿಯಾಗಿದ್ದಾನೆ. ಚಾಲಕನ್ನು ಹಿಡಿದು ಶಿಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


Related Articles

Back to top button