Karnataka News

*ಹಾಲು ತರಲು ಹೋಗಿದ್ದ ಮಹಿಳೆಯನ್ನು ಎಳೆದೊಯ್ಯಲು ಯತ್ನ: ಕಾಮುಕನನ್ನು ಹಿಡಿದು ಥಳಿಸಿದ ಸ್ಥಳೀಯರು*

ಪ್ರಗತಿವಾಹಿನಿ ಸುದ್ದಿ; ರಾಜ್ಯದಲ್ಲಿ ಪ್ರತಿದಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಹಾಲು ತರಲೆಂದು ಅಂಗಡಿಗೆ ಹೋಗಿದ್ದ ಮಹಿಳೆಯನ್ನು ಕಾಮುಕನೊಬ್ಬ ಎಳೆದೊಯ್ಯಲು ಯತ್ನಿಸಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಕಲ್ಕೆರೆ ಕಾಲೋನಿಯಲ್ಲಿ ನಡೆದಿದೆ.

ರವಿಕುಮಾರ್ ಎಂಬಾತ ಮಹಿಳೆಯನ್ನು ಎಳೆದೊಯ್ಯಲು ಯತ್ನಿಸಿದ್ದು, ಮಹಿಳೆ ಕಿರುಚುತ್ತಿದ್ದಂತೆ ಓಡಿಬಂದ ಸ್ಥಳೀಯರು, ರವಿಕುಮಾರ್ ನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

Home add -Advt

ಆರೋಪಿ ರವಿಕುಮಾರ್ ಧಾರವಾಡ ಮೂಲದವನಾಗಿದ್ದು, ಕಲ್ಕೆರೆ ಬಳಿ ಹೊಟೆಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. ಮಹಿಳೆ ಅಂಗಡಿಗೆ ಹಲುತರಲೆಂದು ಬಂದಿದ್ದ ವೇಳೆ ಹಿಂದಿನಿಂದ ಬಂದು ಆಕೆಯ ಬಾಯಿಮುಚ್ಚಿ ಎಳೆದೊಯ್ಯಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೂಗಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯ ಯುವಕರು ರವಿಕುಮಾರ್ ನನ್ನು ನಗ್ನಗೊಳಿಸಿ ಹೊಡೆದಿದ್ದಾರೆ ಎನ್ನಲಾಗಿದೆ.

ಬನ್ನೇರುಘಟ್ಟ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button