
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರ್ವಹಣೆ ಇಲ್ಲದ ಪಾರ್ಕ್ ಹೊಂಡದಲ್ಲಿ ಬಿದ್ದು 9 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರತಾಪ್ ಮೃತ ಬಾಲಕ. ಬೆಂಗಳೂರಿನ ಮಲ್ಲಸಂದ್ರದ ಕೆಂಪೇಗೌಡ ಪಾರ್ಕ್ ನಲ್ಲಿ ಈ ದುರಂತ ಸಂಭವಿಸಿದೆ. ಮಳೆಯಿಂದಾಗಿ ಪಾರ್ಕ್ ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಹೊಂಡಕ್ಕೆ ಬಿದ್ದಿದ್ದಾನೆ.
7 ಎಕರೆಯಲ್ಲಿ ನಿರ್ಮಾಣಗೊಂಡಿರುವ ಕೆಂಪೇಗೌಡ ಪಾರ್ಕ್, ನಿರ್ವಹಣೆಯಿಲ್ಲದೇ, ಭದ್ರತಾ ಸಿಬ್ಬಂದಿಗಳೂ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ಪಾರ್ಕ್ ನಿರ್ವಹಣೆ ಮಾಡದ ಬಿಬಿಎಂಪಿಯ ಬೇಜವಾಬ್ದಾರಿ ಅಧಿಕಾರಿಗಳೇ ಬಾಲಕನ ಸಾವಿಗೆ ಕಾರಣ ಎಂದು ಪೋಷಕರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.