Kannada NewsKarnataka NewsLatest

*71ನೇ ಕನ್ನಡ ರಾಜ್ಯೋತ್ಸವ*: *ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: 71ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್​​ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತತಿದ್ದರು.

ಈ ವೇಳೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕದ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು. ಈ‌ ಭಾಷೆಗೆ ಯಾವುದೇ ಗಡಿ ಇಲ್ಲ, ಬ್ರಿಟೀಷರಿಗೆ ನಮ್ಮ‌ಮಾತೃಭಾಷೆ ಯಾವುದು ನಮೂದು‌ ಮಾಡಿ ಅಂತಾ ಬಿಟ್ಟು ಹೋದ‌ ಇತಿಹಾಸ ಇದೆ. ಎಲ್ಲಾ ಸರ್ಕಾರಿ‌ ಕಚೇರಿಗಳ ಮೇಲೆ ,‌ ಖಾಸಗಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸಲು ಆದೇಶ ಹೊರಡಿಸಲು ಸಿದ್ಧತೆ ಮಾಡ್ಕೊಂಡಿದೇವೆ ಎಂದರು.

ನಿನ್ನೆ ಮೊನ್ನೆ ಕೂಡ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಈ ಅಧಿವೇಶನದಲ್ಲಿ ಕೆಲವು ವಿಚಾರಗಳನ್ನ ಮಂಡನೆ ಮಾಡ್ತೇವೆ. ನಮ್ಮ ಧ್ವಜವನ್ನು ನಾವು ಎಲ್ಲಾ ಕಡೆ ಬಳಸಲು ಬದ್ಧರಾಗಿರಬೇಕು. ಬೇರೆ ಯಾವ ರಾಜ್ಯದಲ್ಲೂ ಹೀಗೆ ಧ್ವಜ ಬಳಕೆ ಇಲ್ಲ. ಸಾರ್ವಜನಿಕ ಚರ್ಚೆ, ಶಾಸಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ಕೇಂದ್ರಕ್ಕೆ ನಿರ್ಣಯ ಕಳಿಸಿಕೊಡ್ತೇವೆ. ಇಡೀ ವಿಶ್ವದಲ್ಲಿರುವ ಕನ್ನಡಿಗರು ಸೇರಿದಂತೆ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಗಳನ್ನು ಕೋರಿದರು.

Related Articles

Back to top button