Kannada NewsKarnataka News

75 ಸಾವಿರ ಜನರಿಂದ 75 ಕಿಮೀ ಕಾಲ್ನಡಿಗೆ – ಕಿತ್ತೂರಲ್ಲಿ ಡಿ.ಕೆ.ಶಿವಕುಮಾರ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು – ಭಾರತ ದೇಶ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಪ್ರಯುಕ್ತವಾಗಿ ಕಿತ್ತೂರಿನ ವೀರರಾಣಿ ಚನ್ನಮ್ಮನ ಕೋಟೆ ಆವರಣದಲ್ಲಿ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇವತ್ತಿನ ದಿನ ಪವಿತ್ರ ದಿನವಾಗಿದ್ದು, ನನ್ನ ಜೀವನದ ಒಂದು ಐತಿಹಾಸಿಕ ಕ್ಷಣವಾಗಿದೆ, ಭಾರತ ದೇಶ ಕಂಡಂತಹ ಅದರಲ್ಲೂ ನಮ್ಮ ರಾಜ್ಯದ ಹೆಮ್ಮೆಯ ವೀರನಾರಿ ಕಿತ್ತೂರು ಚನ್ನಮ್ಮನವರನ್ನು ಸ್ಮರಿಸಿ, ದೇಶಕ್ಕೆ ನಮನಗಳನ್ನು ಸಲ್ಲಿಸುವ ಕೆಲಸ ಮಾಡೋಣ ಎಂದರು.
 
ಈ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು 75 ಕಿಮೀಗಳಷ್ಟು ಕಾಲ್ನಡಿಗೆಯ ಮೂಲಕ ಸಂಚರಿಸಿ ಅತೀ ಸಂಭ್ರಮದಿಂದ ಆಚರಿಸೋಣ ಹಾಗೂ ಬೆಂಗಳೂರಿನಲ್ಲಿ 75 ಸಾವಿರ ಜನ ರಾಷ್ಟ್ರಧ್ವಜವನ್ನು ಹಿಡಿದು ಕಾಲ್ನಡಿಗೆ ಮಾಡಬೇಕೆಂದು ರಾಷ್ಟ್ರದ ನಾಯಕಿ  ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
 ಸೋನಿಯಾ ಗಾಂಧಿಯವರೊಂದಿಗಿನ ಚರ್ಚೆಯಲ್ಲಿ ವಿಪಕ್ಷ ನಾಯಕ  ಸಿದ್ದರಾಮಯ್ಯ, ಬಿ ಕೆ. ಹರಿಪ್ರಸಾದ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟ ಎಲ್ಲ ನಾಯಕರು ಸೇರಿದ್ದರು. ಸುಧೀರ್ಘ ಕಾಲ ಚರ್ಚಿಸಿದ್ದೇವೆ ಎಂದರು.
ಬೆಳಗಾವಿ ಜಿಲ್ಲೆ ಎಂದರೆ ಮೊದಲು ನೆನಪಾಗುವುದು ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ ಹಾಗೂ ಮುಂತಾದವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ಇವರೆಲ್ಲರ ತ್ಯಾಗ ಬಲಿದಾನಗಳನ್ನು ಸದಾಕಾಲವೂ ಸ್ಮರಿಸಿ, ಗೌರವಿಸೋಣ ಹಾಗೂ ಈ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಇತಿಹಾಸ ಪುಟ್ಟದಲ್ಲಿ ಅಚ್ಚಳಿಯದಂತೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ, ಕುಸುಮ ಶಿವಳ್ಳಿ, ವಿನಯ ನಾವಲಗಟ್ಟಿ, ಮಹಾಂತೇಶ  ಮತ್ತಿಕೊಪ್ಪ, ಎನ್.ಎಚ್. ಕೋನರೆಡ್ಡಿ, ಮೃಣಾಲ ಹೆಬ್ಬಾಳಕರ್, ರಜತ್ ಉಳ್ಳಾಗಡ್ಡಿಮಠ್, ಬಾಬಾಸಾಹೇಬ್ ಪಾಟೀಲ, ರೋಹಿಣಿ ಪಾಟೀಲ, ಪಕ್ಷದ ಕಾರ್ಯಕರ್ತರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/latest/belagaviswatantrayada-amruta-mahotsavaabhaya-patil/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button