ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯದ ಜನತೆಗೆ ಸ್ವಾತಂತ್ರ್ಯೋತ್ಸವ ದಿನದ ಶುಭಾಷಯ ಕೋರಿದರು.
ಬಳಿಕ ಮಾತನಾಡಿದ ಸಿಎಂ, ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಕಾಲ ಬಂದಿದೆ. ರೈತರನ್ನು ಕೇಂದ್ರ ಬಿಂದುವನ್ನಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ರೈತನ ಶ್ರಮ, ಕೂಲಿಕಾರನ ಬೆವರಲ್ಲಿ ದೇವರಿದ್ದಾನೆ. ಇದಕ್ಕೆ ನಾವು ಬೆಲೆ ಕೊಡಬೇಕು ಎಂದರು.
ಕೃಷಿ ಕ್ಷೇತ್ರದಲ್ಲಿ ಶೇ.1ರಷ್ಟು ಬೆಳವಣಿಗೆಯಾದರೆ ಕೈಗಾರಿಕಾ ಕ್ಷೇತ್ರದಲಿ ಶೇ.4ರಷ್ಟು ಬೆಳವಣಿಗೆಯಾಗುತ್ತಿದೆ. ಸೇವಾ ವಲಯದಲ್ಲಿ ಶೇ.10ರಷ್ಟು ಅಭಿವೃದ್ಧಿಯಾಗುತ್ತಿದೆ. ಬೆಳವಣಿಗೆ ಅಂದರೆ ಕೇವಲ ಅಂಕಿ-ಅಂಶವಲ್ಲ. ರಾಜ್ಯದ ಪ್ರತಿಯೊಬ್ಬರ ಬದುಕು ಹಸನಾಗಬೇಕು. ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ ಯೊಂದಿಗೆ ನವ ಕರ್ನಾಟಕ ನಿರ್ಮಾಣವಾಗಬೇಕು. ಎಲ್ಲಿ ಜನ ವಾಸವಾದ್ದಾರೆ ಅಲ್ಲಿಗೆ ಅಭಿವೃದ್ಧಿ ಯೋಜನೆಗಳು ತಲುಪಬೇಕು. ಸರ್ಕಾರಿ ಕಚೇರಿಗಳಿಗೆ ಜನರು ಓಡಾಡುವ ಸ್ಥಿತಿ ನಿಲ್ಲಬೇಕು. ಎಲ್ಲಾ ಯೋಜನೆಗಳನ್ನು ಮನೆ ಬಾಲಿಗೆ ತಲುಪಿಸಲಾಗುವುದು. ಜನಸ್ನೇಹಿ ಸರ್ಕಾರ ನಮ್ಮದಾಗಬೇಕು ಎಂಬುದೇ ಉದ್ದೇಶ ಎಂದರು.
ಕೊರೊನಾ ಒಂದು ಸವಾಲು. ಜನರ ಸುರಕ್ಷತೆ ನಮ್ಮ ಹೊಣೆ, ಕೋವಿಡ್ ನಿಂದ ಜನರನ್ನು ಕಾಪಾಡುವ ಕೆಲಸ ಮಾಡುತ್ತೇವೆ. ಅಧಿಕಾರಕ್ಕೆ ಬಂದು ಮರುದಿನವೇ ಪ್ರವಾಹ ಪ್ರವಾಸ ಕೈಗೊಂಡು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ನೀಡುವ ನಿಟ್ಟಿನಲ್ಲಿ ಸೂಚಿಸಿದ್ದೇನೆ. ಮೇಕೆದಾಟು, ಮಹದಾಯಿ ಯೋಜನೆ ಮಾಡಬೇಕಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಮುಖ್ಯ. 750 ಶಾಲೆಗಳಿಗೆ ತಲಾ 10 ಲಕ್ಷ ನೀಡಲಾಗುವುದು, ಅಮೃತ ಅಂಗನವಾಡಿ ಯೋಜನೆ ಮೇಲ್ದರ್ಜೆಗೇರಿಸಲಾಗುವುದು. ನೀತನವಾಗಿ ಅಮೃತ ಗ್ರಾಮೀಣ ಯೋಜನೆ ಜಾರಿ ತರಲಾಗುತ್ತಿದ್ದು, ಆಯ್ದ 750 ಗ್ರಾಮಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಮುಖ್ಯಮಂತ್ರಿಗಳ ಭಾಷಣದ ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – A5-CM Speech-2021-FINAL
ನೂತನ ಅರಣ್ಯ ಸಚಿವ ಉಮೇಶ ಕತ್ತಿ ಗಮನಕ್ಕೆ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ