*ಜೊಲ್ಲೆ ಗ್ರುಪ್ ನ ಶಿವಶಂಕರ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನ ಆಚರಣೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೊಲ್ಲೆ ಎಜ್ಯುಕೇಶನ್ ಸೊಸಾಯಟಿಯ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ವೇದಿಕೆ ಮೇಲಿನ ಗಣ್ಯರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಅವರು ಧ್ವಜಾರೋಹಣ ನೆರವೆರಿಸಿದರು.
ದಿವ್ಯ ಸಾನಿಧ್ಯ ವಹಿಸಿದ ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದ ಮಹಾಸ್ವಾಮೀಜಿ ಹಾಗೂ ಮುಖ್ಯ ಅತಿಥಿ ಸ್ಥಾನ ವಹಿಸಿದ ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಚಿಕ್ಕೋಡಿ ಮಾಜಿ ಸಂಸದರು ಅಣ್ಣಾಸಾಹೇಬ ಜೊಲ್ಲೆ ಇವರು ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ ಮರಗಳ ಅಲಂಕಾರ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕ್ರತರ ಭಾವಚಿತ್ರ ಹಾಗೂ ಮಾಹಿತಿ ಸಂಗ್ರಹಣೆಯ ಪ್ರದರ್ಶನ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಪಾಟ್ ತಯಾರಿಕೆ ಪ್ರದರ್ಶನವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.
ನಾವೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ನೆನಪಿನಲ್ಲಿಟ್ಟುಕೊಂಡು ದೇಶ ಸೇವೆಯೇ ದೇವರ ಸೇವೆ ಎಂದು ತಿಳಿದು ಮಕ್ಕಳಿಗಾಗಿ ನಾವೂ ಯಾವ ಆಸ್ತಿಯನ್ನು ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿಸಿಕೊಂಡು ದೇಶಕ್ಕಾಗಿ ಒಳ್ಳೆಯ ಪ್ರಜೆಗಳನ್ನು ನಿರ್ಮಿಸುವುದು ಅವಶ್ಯಕ, ಇಂದು ನಾವೂ ಧರ್ಮಮಾರ್ಗದಲ್ಲಿ ನಡೆದು ಭವಿಷತ್ತಿನ ಆದರ್ಶ ಪ್ರಜೆಗಳಾಗಿ ಎಲ್ಲ ವಿದ್ಯಾರ್ಥಿಗಳು ಬೆಳೆದು ವಿಶ್ವಕ್ಕೆ ಮಾದರಿ ರಾಷ್ಟ್ರವನ್ನಾಗಿ ನಿರ್ಮಿಸಲು ಪ.ಪೂ.ಡಾ. ಶ್ರದ್ಧಾನಂದ ಮಹಾಸ್ವಾಮೀಜಿ ಕರೆ ನೀಡಿದರು.
ಶಾಲೆಯ ಸಹಶಿಕ್ಷಕರಾದ ಎಲ್ ಎಸ್ ಖೋತರವರು ಮಾತನಾಡಿ ಗಾಂಧೀಜಿಯವರು ಸತ್ಯ ಅಹಿಂಸಾತ್ಮಕ ಹೋರಾಟ ಹಾಗೂ ಅನೇಕ ಚಳುವಳಿಗಳ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಡುವುದರಲ್ಲಿ ಯಶಸ್ವಿಯಾದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವ್ಹಿ.ಆರ್.ಭಿವಸೆ ಮಾತನಾಡಿ ಭಾರತವು ಅನೇಕ ಸ್ವಾತ್ಯಂತ್ರ ಹೋರಾಟಗಾರರ ನಿರಂತರ ಪರಿಶ್ರಮದ ಫಲವಾಗಿ ಇಂದು ನಾವೂ 78ನೇ ಸ್ವಾತಂತ್ರ್ಯ ದಿನವನ್ನು ನಮ್ಮ ಶಾಲೆಯಲ್ಲಿ ಅತಿ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಸ್ವಾತಂತ್ರ್ಯಕ್ಕಾಗಿ ಮಡಿದ ವೀರರನ್ನು ಸ್ಮರಿಸಿ ಅವರ ತತ್ವ, ಆದರ್ಶತೆಗಳನ್ನು ಮೈಗೂಡಿಸಿಕೊಂಡು ರಾಷ್ಟ್ರದ ಪ್ರಗತಿಗೆ ನಾವೆಲ್ಲರೂ ಬದ್ಧರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕಷರ್ಕ ಪಥಸಂಚಲನ, ಭಾಷಣ, ದೇಶಭಕ್ತಿಗೀತೆಗಳು ಕಾರ್ಯಕ್ರಮಕ್ಕೆ ಶೋಭೆಯನ್ನು ನೀಡಿದವು. ಜೊಲ್ಲೆ ಗ್ರೂಪ್ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳಾದ ಜಯಾನಂದ ಜಾಧವ, ಲಕ್ಷ್ಮಣ ಕಬಾಡೆ, ಬಾಬುರಾವ ಮಾಳಿ, ಅಪ್ಪಾಸಾಬ ಜೊಲ್ಲೆ, ಮಂಗಲ ಜೊಲ್ಲೆ, ಫೈಮೀದಾ ದಾಡಿವಾಲೆ, ಲತಾ ವಾಳಕೆ, ಜೊಲ್ಲೆ ಗ್ರೂಪ್‍ನ ಮುಖ್ಯ ಶಿಕ್ಷಣ ಆಡಳಿತಾಧಿಕಾರಿಗಳಾದ ಡಾ. ಶಿರಿಷ ಕೇರೂರ, ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸಾಯಿಟಿಯ ಸಿ.ಇ.ಓಗಳಾದ ಆರ್.ಸಿ.ಚೌಗಲಾ, ಪ್ರಧಾನ ವ್ಯವಸ್ಥಾಪಕರಾದ ಬಿ.ಎ.ಗುರವ, ವಿಜಯ ಖಡಕಬಾವಿ ಉಪಸ್ಥಿತರಿದ್ದರು, ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸಾಯಿಟಿ ಲಿಮಿಟೆಡ್ ಯಕ್ಸಂಬಾ (ಮಲ್ಟಿಸ್ಟೇಟ್) ಹಾಗೂ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಎಲ್ಲ ಸದಸ್ಯರು, ಉಪಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ಶಾಲೆಯ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪೂರ್ವಾ ವಾಲಿಕರ ನಿರೂಪಿಸಿ, ಅನನ್ಯಾ ಚೌಗಲೆ ಸ್ವಾಗತಿಸಿ, ನೇತ್ರಾ ಗಜಬರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ