Belagavi NewsBelgaum NewsKarnataka News

*ದೇಶದ ಏಕತೆ-ಸಮಗ್ರತೆಯ ರಕ್ಷಣೆ ನಮ್ಮೆಲ್ಲರ ಹೊಣೆ: ಸಚಿವ ಸತೀಶ ಜಾರಕಿಹೊಳಿ*

ಬೆಳಗಾವಿ: ಧ್ವಜಾರೋಹಣ ನೆರವೇರಿಸಿದ ಸಚಿವರು

ಪ್ರಗತಿವಾಹಿನಿ ಸುದ್ದಿ: ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರಗೊಂಡು ಈ ೭೭ ವಸಂತ ಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣಿ ರಾಷ್ಟçವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ(ಆ.೧೫) ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶ ಸ್ವತಂತ್ರಗೊಂಡು ಇಂದಿಗೆ ೭೭ ವರ್ಷಗಳಾದವು. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತವು ಭದ್ರ ಬುನಾದಿ ಹಾಕಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತ್ರೀ, ಬಾಲಗಂಗಾಧರ ಟಿಳಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣದ ನಂತರ ಜರುಗಿದ ವಿವಿಧ ಕವಾಯತ ಪಡೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಗೌರವ ವಂದನೆ ಸ್ವೀಕರಿಸಿದರು. ತದನಂತರ ಕವಾಯತ ಕಮಾಂಡರುಗಳಾದ ಎ.ಎಸ್.ವಾರದ ಹಾಗೂ ಇಮ್ತಿಯಾಜ ದಖನಿ ಅವರ ನೇತೃತ್ವದಲ್ಲಿ ಜರುಗಿದ ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದ್ದ ಜಿಲ್ಲಾ ಪೋಲಿಸ ಸಶಸ್ತöç ಪಡೆ, ಪುರುಷ ಹಾಗೂ ಮಹಿಳಾ ನಾಗರಿಕ ಪೋಲಿಸ ಪಡೆ, ಕೆ.ಎಸ್.ಆರ್.ಪಿತುಕುಡಿ, ಗೃಹ ರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ, ಎನ್.ಸಿ.ಸಿ ಸೀನಿಯರ್ಸ ಬಾಯ್ಸ್ ಹಾಗೂ ಗಗರ್ಲ್ಸ್, ಭಾರತ ಸೇವಾ ದಳದ ಮಹಿಳಾ ವಿದ್ಯಾಲಯ, ಅಗಸಗಾದ ಎಸ್.ಎಲ್.ವಿಕೆ ಪ್ರೌಢ ಶಾಲೆ, ಗಲ್ರö್ಸ ಗೈಡ್ ಮಹಿಳಾ ವಿದ್ಯಾಲಯ, ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ, ಜೈನ ಹೆರಿಟೆಜ್ ಶಾಲೆ, ಡಿ.ಪಿ ಶಾಲೆ, ಖಂಜದರ ಗಲ್ಲಿ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ, ಶರ್ಮನ ಕನ್ನಡ ಮಾಧ್ಯಮ ಶಾಲೆ, ಲಿಟಲ್ ಸ್ಕಾಲರ ಅಕಾಡೆಮಿ ಶಾಲೆ, ಬೆಳಗಾವಿ ಪಬ್ಲಿಕ ಶಾಲೆ ಹಾಗೂ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿಧ್ಯಾರ್ಥಿಗಳ ಆಕರ್ಷಕ ಪಥ ಸಂಚಲನವು ಸಭಿಕರ ಗಮನ ಸೆಳೆದವು

ಸನ್ಮಾನಿತರು: ಅಂಗಾಂಗಾ ದಾನ ಮಾಡಿದ ಕುಟುಂಬ ಸದಸ್ಯರುಗಳಾದ ಅಬ್ದುಲ ರಜಾಕ್, ದುಂಡಪ್ಪ ಬಿ.ಪಿ, ದೀಪಾ ಸರ್ವಿ, ಹಾಗೂ ಅಲ್ಪಸಂಖ್ಯಾತರ ಸಮುದಾಯದ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಾದ ತೀರ್ಥಾ.ಎಸ್, ಜೋಷು ಆನಂದ ರೋಟಿ, ಶಾಫ್ ಅಹಮದ ಕಿತ್ತೂರ,ಮೊಹಮ್ಮದ ತಹಾ ಖಾನ, ಆಸ್ತಾ ದೀಪಕ ಪಾಟೀಲ,ಸಾಹೀಬಾ ಖಾಜಿಮಿಯಾ ಸನದಿ, ತನಿಷ್ಕ ಜಮಾಲ ವಡ್ರಾಳಿ, ಸಮ್ಮೇದ ಪಾರೀಸ್ ಭೋಜ, ಸಮ್ಮೇದ ಸಂಜು ಸುಪ್ಪಣ್ಣವರ,ಮೆಹಬೂಬಿ ಬಸೀರ ನಾಲಬಂದ ಇವರುಗಳನ್ನು ಸಚಿವರು ಹಾಗೂ ಗಣ್ಯರುಗಳು ಸನ್ಮಾನಿಸಿದರು.

ಸಸಿ ವಿತರಣೆ: ಜಿಲ್ಲೆಯಲ್ಲಿ ತಾಳೆ ಬೆಳೆ ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ರೈತರುಗಳಾದ ಪಿರಾಜಿ ಮಾವುತ, ರವಿರಾಜ ಹವಾಲದಾರ, ರಘುನಾಥ ದಳವಿ, ಭುಜಂಗ ಖಡವಾಡಕರ, ಶ್ರೀಮತಿ ಗೀರಿಜಾ ಪಾಟೀಲ ಅವರುಗಳಿಗೆ ಉಚಿತ ತಾಳೆ ಸಸಿಗಳನ್ನು ಸಚಿವರು ವಿತರಿಸಿದರು.

ಈ ಸಂದರ್ಭದಲ್ಲಿ ಸಂಸದ ಜಗದೀಶ್ ಶೆಟ್ಟರ್, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ಮಹಾನಗರ ಪಾಲಿಕೆ ಮಹಾಪೌರ ಸವಿತಾ ಕಾಂಬಳೆ, ಬುಡಾ ಅಧ್ಯಕ್ಷ ಲಕ್ಷ್ಮಮಣರಾವ್ ಚಿಂಗಳೆ, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಪಿ ರೋಹನ್ ಜಗದೀಶ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಗಣ್ಯರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ವಿಧ್ಯಾರ್ಥಿಗಳು, ಸಾರ್ವಜನಿಕರು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ:

೭೮ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇಲ್ಲಿ ಉಪಸ್ಥಿತರಿರುವ ಸ್ವಾತಂತ್ರ್ಯ ಹೋರಾಟಗಾರರೇ, ಜಿಲ್ಲೆಯ ಸಮಸ್ತ ಚುನಾಯಿತ ಪ್ರತಿನಿಧಿಗಳೇ, ಗಣ್ಯಮಾನ್ಯರೇ, ಎಲ್ಲಾ ಆಮಂತ್ರಿತರೇ, ಅಧಿಕಾರಿ ವರ್ಗದವರೇ, ನಾಗರಿಕ ಬಂಧುಗಳೇ ಮಾಧ್ಯಮದ ಸ್ನೇಹಿತರೇ ಹಾಗೂ ಮುದ್ದು ಮಕ್ಕಳೇ…ತಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

ದೇಶ ಸ್ವತಂತ್ರಗೊಂಡು ಇಂದಿಗೆ ೭೭ ವರ್ಷಗಳಾದವು. ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಮೂಲಕ ಭಾರತೀಯರು ಗಳಿಸಿದ ಸ್ವಾತಂತ್ರö್ಯವು ಜಗತ್ತಿನ ರಾಜಕೀಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತವು ಭದ್ರ ಬುನಾದಿ ಹಾಕಿದೆ.
ಈ ಶುಭ ಸಂದರ್ಭದಲ್ಲಿ ಸ್ವಾತಂತ್ರö್ಯ ಹೋರಾಟಗಾರರಾದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಲಾಲ್‌ಬಹದ್ದೂರ್ ಶಾಸ್ತಿç, ಬಾಲಗಂಗಾಧರ ಟಿಳಕ ಸೇರಿದಂತೆ ಇನ್ನೂ ಅನೇಕ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಬೆಳಗಾವಿ ಜಿಲ್ಲೆಯು ಸ್ವಾತಂತ್ರö್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು.

ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದಳು. ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರö್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ರಂದು ವೀರಮರಣವನ್ನಪ್ಪಿದ್ದು ಜನವರಿ ೨೬. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು ಗಂಗಾಧರರಾವ್ ದೇಶಪಾಂಡೆ. ‘ಕರ್ನಾಟಕದ ಸಿಂಹ’ ಹಾಗೂ ‘ಕರ್ನಾಟಕದ ಖಾದಿ ಭಗೀರಥ’ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರನ್ನು ಇಂದು ನಾವು ನೆನಪಿಸಿಕೊಳ್ಳಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಹಾದಿಯಲ್ಲಿ ದೃಢವಾದ ಹೆಜ್ಜೆಯನ್ನು ಇಟ್ಟಿದೆ. ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ ರಾಜ್ಯದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ೧೯೨೪ ರಲ್ಲಿ ಬೆಳಗಾವಿಯಲ್ಲಿ “ಕಾಂಗ್ರೆಸ್ ಅಧಿವೇಶನ” ಜರುಗಿ ನೂರು ವರುಷಗಳ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ “ಕಾಂಗ್ರೆಸ್ ಅಧಿವೇಶನ”ದ ಶತಮಾನೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ಸರಕಾರವು ನಿರ್ಧರಿಸಿದೆ. ಇದಕ್ಕಾಗಿ ಆಯವ್ಯಯದಲ್ಲಿ ಎರಡು ಕೋಟಿ ರೂಪಾಯಿಗಳನ್ನು ಕೂಡ ತೆಗೆದಿರಿಸಿದೆ.

ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಬೆಳಗಾವಿ ನಗರ ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ

ಶಕ್ತಿ ಯೋಜನೆ-
ಬೆಳಗಾವಿ ಜಿಲ್ಲೆಯಲ್ಲಿ ಶಕ್ತಿ ಯೋಜನೆ ಪೂರ್ವದಲ್ಲಿ ಪ್ರತಿದಿನ ಸರಾಸರಿ ೫.೪೦ ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭದ ನಂತರ ಪ್ರತಿದಿನ ಸರಾಸರಿ ಒಟ್ಟು ೭.೬೫ ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಅದರಿಂದ ಒಟ್ಟು ೨.೨೫ ಲಕ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಪ್ರತಿದಿನ ಹೆಚ್ಚಳವಾಗಿರುತ್ತದೆ.
ಶಕ್ತಿ ಯೋಜನೆ ಅಡಿಯಲ್ಲಿ ೧೧ ಜೂನ್ ೨೦೨೩ ರಿಂದ ೨ ಆಗಸ್ಟ್ ೨೦೨೪ವರೆಗೆ (೪೧೯ ದಿನಗಳು) ಒಟ್ಟು ೩೨.೦೪ ಕೋಟಿ ಪ್ರಯಾಣಿಕರಲ್ಲಿ, ೨೦.೧೩ ಕೋಟಿ ಮಹಿಳಾ ಪ್ರಯಾಣಿಕರು (ಶೇಕಡಾ ೬೨.೮) ಪ್ರಯಾಣಿಸಿದ್ದು, ರೂ೪೭೩.೪೮ ಕೋಟಿ ಮೊತ್ತದ ಶೂನ್ಯ ಟಿಕೇಟ್ ವಿತರಿಸಲಾಗಿದೆ.
ಅನ್ನಭಾಗ್ಯ-
“ಹಸಿವುಮುಕ್ತ ಕರ್ನಾಟಕ” ಇದು ನಮ್ಮ ಸರ್ಕಾರದ ಮುಖ್ಯ ಧ್ಯೇಯವಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.
ಜುಲೈ ೨೦೨೩ರಿಂದ ಜೂನ್ ೨೦೨೪ರ ವರೆಗೆ ೬೧೩ ಕೋಟಿ ಮೊತ್ತವನ್ನು ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.
ಗೃಹಜ್ಯೋತಿ-
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೧೦.೩೦ ಲಕ್ಷ ಗೃಹ ವಿದ್ಯುತ್ ಬಳಕೆದಾರರ ಪೈಕಿ ಗೃಹಜ್ಯೋತಿ ಯೋಜನೆಯಡಿ ಒಟ್ಟು ೯,೯೩,೫೪೭ ಸಂಖ್ಯೆಯ ಬಳಕೆದಾರರು ನೋಂದಾಯಿಸಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಡಿಯಲ್ಲಿ ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ ೨೦೦ ಯೂನಿಟ್‌ಗಳ ವರೆಗೆ ಉಚಿತವಾಗಿ ವಿದ್ಯುತ್‌ನ್ನು ನೀಡಲಾಗುತ್ತಿದೆ.
ಗೃಹಲಕ್ಷ್ಮೀ-
ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ೧೧,೮೭,೪೬೯ ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, ಇಲ್ಲಿಯವರೆಗೆ ೧೦,೭೫,೧೧೮ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿಯಾಗಿರುತ್ತಾರೆ.
ಇಲ್ಲಿಯವರೆಗೆ ೧೦.೯೭ ಲಕ್ಷ ಫಲಾನುಭವಿಗಳಿಗೆ ಮಾಸಿಕ ರೂ.೨೦೦೦/- ರಂತೆ ೧೦ ಕಂತುಗಳಿಗೆ (ಅಗಸ್ಟ್-೨೦೨೩ ರಿಂದ ಮೇ-೨೦೨೪ರವರೆಗೆ) ೨೧೯೫ ಕೋಟಿ ೮೬ ಲಕ್ಷಗಳಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿರುತ್ತದೆ.
ಯುವನಿಧಿ-
“ಯುವನಿಧಿ” ಯೋಜನೆಯಡಿ ಜಿಲ್ಲೆಯಲ್ಲಿ ೧೧,೩೬೫ ಅರ್ಜಿಗಳನ್ನು ಪರಿಗಣಿಸಲಾಗಿರುತ್ತದೆ. ಈ ಪೈಕಿ ೩೭೫೩ ಪುರುಷರು ಹಾಗೂ ೨೭೩೫ ಮಹಿಳೆಯರು ಸೇರಿದಂತೆ ಒಟ್ಟಾರೆ ೬೪೮೮ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಉಳಿದ ಅರ್ಜಿದಾರರ ದಾಖಲೆಗಳ ಪರಿಶೀಲನೆ ನಡೆದಿರುತ್ತದೆ.

ಈ ವರ್ಷ ಜೂನ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿರುವುದರಿಂದ ಮುಂಗಾರು ಬಿತ್ತನೆ ಪ್ರಾರಂಭವಾಗಲು ಅನುಕೂಲವಾಯಿತು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು ೭.೪೩ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು ೭.೪೩ ಲಕ್ಷ ಹೆಕ್ಟೇರ್ ಅಂದರೆ ಶೇ. ೧೦೦% ರಷ್ಟು ಬಿತ್ತನೆಯಾಗಿರುತ್ತದೆ.
ಬಿತ್ತನೆಕಾರ್ಯಕ್ಕೆ ಬೇಕಾಗುವ ಉತ್ತಮ ಗುಣಮಟ್ಟದ ೩೬,೯೩೫ ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿದರದಲ್ಲಿ ಸುಮಾರು ೨.೭೧ ಲಕ್ಷ ರೈತರಿಗೆ ಸಕಾಲದಲ್ಲಿ ಪೂರೈಸಲಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ಬೆಳೆಗಳು ಚೆನ್ನಾಗಿ ಇರುತ್ತವೆ.
ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ಹೆಚ್ಚು ಮಳೆ ದಾಖಲಾಗಿರುವುದರಿಂದ ಬೆಳೆಗಳಲ್ಲಿ ನೀರು ನಿಂತು ಸುಮಾರು ೪೧,೭೦೦ ಹೆಕ್ಟೇರ್ ಬೆಳೆ ಮುಳುಗಡೆ ಪ್ರದೇಶವೆಂದು ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿ ಇರುತ್ತದೆ.
ಅತೀವೃಷ್ಟಿ/ಪ್ರವಾಹದಿಂದ ಜಿಲ್ಲೆಯಲ್ಲಿ ೧೭ ಮನೆಗಳು ಪೂರ್ಣ ಹಾನಿಯಾಗಿದ್ದು, ೨೦೩ ಮನೆಗಳು ಭಾಗಶಃ ಹಾನಿಯಾಗಿವೆ. ಹೀಗೆ ಹನಿಯಾಗಿರುವ ಒಟ್ಟು ೨೨೦ ಮನೆಗಳಿಗೆ ರೂ ೩೧.೩೨ ಲಕ್ಷ ಪರಿಹಾರ ವಿತರಿಸಲಾಗಿದೆ. ಬಾಕಿ ಉಳಿದ ಪ್ರಕರಣಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ.
ಈ ಸಂದರ್ಭದಲ್ಲಿ ಒಟ್ಟು ಏಳು ಜನರು ಪ್ರಾಣವನ್ನು ಕಳೆದುಕೊಂಡಿದ್ದು, ಒಟ್ಟು ೩೪ ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ೧೧ ಜಾನುವಾರುಗಳ ಜೀವ ಹಾನಿಯಾಗಿದ್ದು, ಈ ಪ್ರಕರಣಗಳಿಗೆ ಒಟ್ಟು ರೂ. ೩.೭೩ ಲಕ್ಷ ಪರಿಹಾರ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಪ್ರವಾಹ ಪೀಡಿತ ೫ ತಾಲೂಕುಗಳಲ್ಲಿ ಒಟ್ಟು ೩೦ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅದರಲ್ಲಿ ಒಟ್ಟು ೬೭೧೨ ಜನ ಆಶ್ರಯವನ್ನು ಪಡೆದುಕೊಂಡಿದ್ದರು.
ತೋಟಗಾರಿಕೆ ಇಲಾಖೆಯಿಂದ ಬೆಳೆ ವಿಮೆ ಯೋಜನೆಯಡಿ ೨೦೨೨-೨೩ ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಳಿಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ೫೮೦೩ ರೈತರಿಗೆ ಒಟ್ಟು ೪೧.೩೧ ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ ೫೩೬ ಜನ ರೈತರಿಗೆ ರೂ. ೯೧.೮೩ ಲಕ್ಷಗಳ ಮೊತ್ತದ ವಿಮೆ ಪರಿಹಾರ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ೨೦೨೪ ನೇ ಸಾಲಿನಲ್ಲಿ ಮುಂಗಾರು ಪೂರ್ವ ಅಕಾಲಿಕ ಮಳೆಯಿಂದಾಗಿ ೧೭೭ ಜನ ರೈತರಿಗೆ ೧೦೫ ಹೆಕ್ಟರ್ ಹಾಗೂ ಮುಂಗಾರಿನಲ್ಲಿ ೭೨೫ ಜನ ರೈತರಿಗೆ ೩೭೨.೩೧ ಹೆಕ್ಟರ್ ಪ್ರದೇಶದಲ್ಲಿ ಬಾಳೆ, ಪಪ್ಪಾಯಿ, ತರಕಾರಿ ಮತ್ತು ಇತರೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು ರೂ. ೮೨.೩ ಲಕ್ಷ ಬೆಳೆ ಪರಿಹಾರಕ್ಕಾಗಿ ವರದಿ ಸಲ್ಲಿಸಲಾಗಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿAಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸೇರಿ ೨೦ ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿದ್ದು, ೩೭೪ ಕೋಟಿ ೪೪ ಲಕ್ಷ ೮೩ ಸಾವಿರ ರೂಗಳ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳು ಪೂರ್ಣಗೊಂಡು ಕೆಲವು ಪ್ರಗತಿಯಲ್ಲಿವೆ.
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು ೪.೪೬ ಲಕ್ಷ ಫಲಾನುಭವಿಗಳಿಗೆ ರೂ. ೩೩೭ ಕೋಟಿ ವಿನಿಯೋಗಿಸಲಾಗಿದೆ.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ೩೬ ನಮ್ಮ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸಾಂಕ್ರಾಮಿಕ ರೋಗಗಳು ಜಿಲ್ಲೆಯಲ್ಲಿ ಹತೋಟಿಯಲ್ಲಿವೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀ ರಾಮೇಶ್ವರ, ಅಡವಿಸಿದ್ದೇಶ್ವರ, ಶಂಕರಲಿಂಗ, ಮಹಾಲಕ್ಷ್ಮಿ, ಮಾರ್ಕಂಡೇಯ ಹೀಗೆ ಒಟ್ಟು ೧೧ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.
ಈ ೧೧ ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ ೬ ತಾಲೂಕುಗಳ ೬೦,೮೩೫ ಹೆ., ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ೧೩,೮೬೯ ಹೆ. ಹಾಗೂ ಬಿಜಾಪೂರ ಜಿಲ್ಲೆಯ ೪೪,೩೭೫ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.
ಈ ಮೇಲ್ಕಂಡ ಏತ ನೀರಾವರಿ ಯೋಜನೆಗಳಿಗೆ ಇದುವರೆಗೆ ೫೩೫೪ ಕೋಟಿ ರೂಪಾಯಿ ವೆಚ್ಚವಾಗಿರುತ್ತದೆ.
ಜಿಲ್ಲಾ ಪಂಚಾಯತಿ ವತಿಯಿಂದ ಬೆಳಗಾವಿ ಜಿಲ್ಲೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ೨೫ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು ೨೬೨ ಜನವಸತಿಗಳಿಗೆ ನದಿ ಜಲ-ಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ.
ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ ೪ ಬಹುಗ್ರಾಮ ಯೋಜನೆಗಳನ್ನು ಯೋಜಿಸಲಾಗಿದ್ದು. ಒಟ್ಟಾರೆ ನಾಲ್ಕು ಬಹುಗ್ರಾಮ ಯೋಜನೆಗಳÀ ಅನುಷ್ಠಾನಕ್ಕೆ ರೂ. ೧,೪೪೪ ಕೋಟಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.

ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದಂತೆ ಒಟ್ಟು ೯ ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪ್ರಸ್ತಾಪಿಸಿ, ಅದರಲ್ಲಿ ಅಥಣಿ ತಾಲೂಕಿಗೆ ೨, ಚಿಕ್ಕೋಡಿ ತಾಲೂಕಿಗೆ ೨, ಗೋಕಾಕ ತಾಲೂಕಿಗೆ ೧ ಹಾಗೂ ರಾಯಬಾಗ ತಾಲೂಕಿಗೆ ೨, ಹುಕ್ಕೇರಿ ತಾಲೂಕಿಗೆ ೨ ಹೀಗೆ ಒಟ್ಟು ೯ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ.
೨೦೨೪-೨೫ನೇ ಸಾಲಿನಲ್ಲಿ ಮಹಾತ್ಮಾ ಗಾಂದಿs ರಾಷ್ಟಿöçÃಯ ಗಾçಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿಯವರಗೆ ೭.೮೯ ಲಕ್ಷ ಕುಟುಂಬಗಳು ನೋಂದಣಿಯಾಗಿದ್ದು, ೭.೮೯ ಲಕ್ಷ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿರುತ್ತದೆ.
೧೩೦ ಲಕ್ಷಗಳ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದ್ದು, ಅದರ ಪೈಕಿ ೫೮.೬೦ ಲಕ್ಷಗಳಷ್ಟು ಮಾನವ ದಿನಗಳನ್ನು ಸೃಜಿಸಿ ಶೇ ೪೫.೦೮% ರಷ್ಟು ಪ್ರಗತಿ ಸಾಧಿಸಲಾಗಿದೆ.
ವಿವಿಧ ವಸತಿ ಯೋಜನೆಯಡಿ ಸನ್ ೨೦೧೩-೧೪ ನೇ ಸಾಲಿನಿಂದ ಇಲ್ಲಿಯವರೆಗೆ ಜಿಲ್ಲಾದ್ಯಂತ ಒಟ್ಟು ೧,೬೫,೬೬೬ ಫಲಾನುಭವಿಗಳಿಗೆ ಈಗಾಗಲೇ ಮನೆ ಮಂಜೂರು ಮಾಡಲಾಗಿದ್ದು, ಒಟ್ಟು ೧,೨೯,೨೪೩ ಮನೆಗಳನ್ನು ಪೂರ್ಣಗೊಳಿಸಲಾಗಿರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-೫ ರಡಿಯಲ್ಲಿ ರೂ. ೪೩೬ ಕೋಟಿಗಳ ಅನುದಾನ ಮಂಜೂರಾಗಿದ್ದು, ಒಟ್ಟು ೧೬೨.೫೦ ಕಿ.ಮೀ ಉದ್ದದ ರಸ್ತೆಗಳನ್ನು ಅಬಿವೃದ್ಧಿಗೊಳಿಸಲು ಟೆಂಡರ್ ಕರೆಯಲಾಗಿದ್ದು, ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು.
ಬೆಳಗಾವಿ ನಗರದಲ್ಲಿ ಯೋಜಿಸಲಾದ ಬೆಳಗಾವಿ ಜಿಲ್ಲಾಡಳಿತ ಸಂಕೀರ್ಣ ಕಟ್ಟಡ ನಿರ್ಮಾಣಕಾಮಗಾರಿಗೆ ರೂ. ೧೦೦ ಕೋಟಿಗಳು ಅನುದಾನ ಮಂಜೂರಾಗಿದ್ದು, ಅಂದಾಜು ಪತ್ರಿಕೆ ಮಂಜೂರಾತಿ ಹಂತದಲ್ಲಿದ್ದು, ಟೆಂಡರ್ ಕರೆದು ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು.
ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಹತ್ತಿರ ರೇಲ್ವೆ ಮೇಲ್ಸೇತುವೆ ಕಾಮಗಾರಿಗಾಗಿ ರೂ. ೩೫ ಕೋಟಿಗಳು ಮಂಜೂರಾಗಿದ್ದು, ರೇಲ್ವೆ ಇಲಾಖೆಯಿಂದ ಪ್ರಸ್ತಾಪಿತ ರೇಲ್ವೆ ಮೇಲ್ಸೇತುವೆಯ ನಕ್ಷೆಗಳಿಗೆ ಮಂಜೂರಾತಿ ದೊರಕಿದ ನಂತರ ಕಾಮಗಾರಿಯನ್ನು ಟೆಂಡರ್ ಕರೆದು ಶೀಘ್ರವಾಗಿ ಕಾಮಗಾರಿಯನ್ನು ಕೈಕೊಳ್ಳಲಾಗುವುದು.
ಬೆಳಗಾವಿ ನಗರದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ಮೊದಲನೆ ಹಂತವಾಗಿ ರೂ. ೧೦ ಕೋಟಿಗಳ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಬೇಗನೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಹತ್ತಿರ ಶ್ರೀ ಛತ್ರಪತಿ ಶಾಹು ಮಹಾರಾಜ ಸೌಹಾರ್ದ ವಿದ್ಯಾರ್ಥಿ ನಿಲಯ (ದೀನದಯಾಳ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ) ರೂ. ೮೨.೫೬ ಕೋಟಿಗಳ ಅನುದಾನದಡಿ ಮಂಜೂರಾದ ಕಾಮಗಾರಿಯು ವಿವಿಧ ಪ್ರಗತಿ ಹಂತದಲ್ಲಿದೆ.

ನಗರೋತ್ಥಾನ (ಮುನಿಸಿಪಾಲಿಟಿ) ಹಂತ-೪ ಯೋಜನೆಯಡಿ ಬೆಳಗಾವಿ ಜಿಲ್ಲೆಯ ೩೭ ನಗರ ಸ್ಥಳೀಯ ಸಂಸ್ಥೆಗಳಿಗೆ ರೂ.೩೧೫ ಕೋಟಿ ಹಂಚಿಕೆಯಾಗಿದ್ದು, ಹಂಚಿಕೆಯ ಶೇಕಡ ೮೫ರಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿರುತ್ತದೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇಂದಿರಾ ಕ್ಯಾಂಟೀನ್ ಒಂದಾಗಿದ್ದು, ಒಟ್ಟು ೧೦ ಇಂದಿರಾ ಕ್ಯಾಂಟೀನ್‌ಗಳು ಚಾಲ್ತಿಯಲ್ಲಿರುತ್ತವೆ. ಇಂದಿರಾ ಕ್ಯಾಂಟೀನ್ ಹಂತ-೨ ರಡಿ ಬೆಳಗಾವಿ ಜಿಲ್ಲೆಯ ೩೧ ನಗರಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆ ಸಹಿತ ಮಂಜೂರಾಗಿದ್ದು. ೧೭ ಕಟ್ಟಡಗಳು ಪ್ರಗತಿಯಲ್ಲಿದ್ದು, ಉಳಿದ ೧೬ ಕಟ್ಟಡಗಳು ಇನ್ನಷ್ಟೇ ಪ್ರಾರಂಭಗೊಳ್ಳಬೇಕಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಸಂಖ್ಯೆ-೬೧ ನೇದ್ದರ ಅನುಷ್ಠಾನಕ್ಕಾಗಿ ಕಣಬರ್ಗಿ ಗ್ರಾಮದಲ್ಲಿನ ೧೫೯ಎಕರೆ-೨೩ಗುಂಟೆ-೦೮ಆಣೆ ನೇದ್ದಕ್ಕೆ ಪ್ರಾಧಿಕಾರ ಮತ್ತು ರೈತರ ಸಹಭಾಗೀತ್ವದಡಿಯಲ್ಲಿನ ೫೦:೫೦ ಅನುಪಾತದ ಒಪ್ಪಂದ ಐತೀರ್ಪಿನಡಿ ಯೋಜನೆಯನ್ನು ಅನುಷ್ಠಾನ ಗೊಳಿಸಲು ಉದ್ದೇಶಿಸಲಾಗಿರುತ್ತದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಟ್ಟು ೧೨೩ಎಕರೆ-೦೮ಗುಂಟೆ ಜಮೀನುಗಳನ್ನು ಕಬ್ಜೆ ಪಡೆಯಲಾಗಿರುತ್ತದೆ. ಸದರಿ ಯೋಜನೆಯಲ್ಲಿ ಕಬ್ಜೆಯನ್ನು ಪಡೆದ ಜಮೀನುಗಳಲ್ಲಿ ಒಟ್ಟು ವಿವಿಧ ಅಳತೆಯ ೧೨೪೭ ನಿವೇಶನಗಳನ್ನು ರೂಪಿಸಲಾಗುವುದು.
ಸದರಿ ಯೋಜನೆಯಲ್ಲಿ ಜಿ+೩ ಮಾದರಿಯ ಗುಂಪು ಮನೆಗಳ ನಿರ್ಮಾಣಕ್ಕಾಗಿ ಒಟ್ಟು ೨೩ಎ-೨೦ಗು ವಿಸ್ತೀರ್ಣದ ಜಮೀನನ್ನು ನಿಗಧಿಪಡಿಸಲಾಗಿದ್ದು, ಪ್ರಾಧಿಕಾರದ ವಲಯ ನಿಯಮಾವಳಿಗಳನ್ವಯ ಒಟ್ಟು ೨೭೬೦ ಮನೆಗಳನ್ನು ಹೊಂದಿದ ಸಂಕೀರ್ಣಗಳ ಸಮುಚ್ಚಯ ನಿರ್ಮಿಸಲು ಉದ್ದೇಶಿಸಲಾಗಿದೆ.


‘ಸ್ಮಾರ್ಟಸಿಟಿ ಯೋಜನೆ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ೫೦:೫೦ ಅನುಪಾತದಲ್ಲಿ ಒಟ್ಟು ರೂ.೧೦೦೦ ಕೋಟಿ ಅನುದಾನ ಒದಗಿಸಲಾಗುತ್ತಿದೆ.


ಇದುವರೆಗೆ ಒಟ್ಟು ರೂ.೯೯೦ ಕೋಟಿ ಅನುದಾನ ಬಿಡುಗಡೆ, ರೂ.೯೧೦.೩೩ ಕೋಟಿ ಖರ್ಚು ಮಾಡಲಾಗಿದೆ. ಸದರಿ ಅನುದಾನದ ಉಳಿತಾಯ ಮೊತ್ತದಲ್ಲಿ ಹೊಸದಾಗಿ ೦೫ ಕಾಮಗಾರಿಗಳನ್ನು ಒಳಗೊಂಡAತೆ ಒಟ್ಟು ೧೦೭ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇವುಗಳಲ್ಲಿ ಪ್ರಸ್ತುತ ೯೭ ಕಾಮಗಾರಿಗಳು ಪೂರ್ಣಗೊಂಡಿವೆ, ಮತ್ತು ೧೦ ಕಾಮಗಾರಿಗಳು ಪ್ರಗತಿಯಲ್ಲಿವೆ.
ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೆ ತರಲಾಗುವುದು ಎಂದರು.

ಲಕ್ಷಾಂತರ ಜನರು ದೇಶದ ಸ್ವಾತಂತ್ರ್ಯಯಕ್ಕಾಗಿ ತಮ್ಮ ಬದುಕನ್ನೇ ಪಣಕ್ಕಿಟ್ಟು ಹೋರಾಡಿದರು. ಸೆರೆಮನೆವಾಸ ಅನುಭವಿಸಿದರು. ಆಂಗ್ಲರ ಗುಂಡಿಗೆ ಬಲಿಯಾದರು. ನೇಣುಗಂಬವನ್ನು ಏರಿದರು. ಅವರ ಹೋರಾಟದ ಫಲವಾಗಿ ಇಂದು ನಾವು ಸ್ವಾತಂತ್ರö್ಯವನ್ನು ಅನುಭವಿಸುತ್ತಿದ್ದೇವೆ.
ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.

ವಿವಿಧತೆಯಲ್ಲಿ ಏಕತೆ ಸಾಧಿಸಿರುವ ನಮ್ಮ ದೇಶವು ಸ್ವತಂತ್ರಗೊಂಡು ಈ ೭೭ ವಸಂತ ಗಳಲ್ಲಿ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ವೈದ್ಯಕೀಯ, ಸಾಮಾಜಿಕ ಹಾಗೂ ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ವಿಶ್ವದ ಮುಂಚೂಣಿ ರಾಷ್ಟçವಾಗಿ ಹೊರಹೊಮ್ಮಿದೆ. ಇಂತಹ ಸುವರ್ಣ ಕಾಲಘಟ್ಟದಲ್ಲಿರುವ ನಮ್ಮ ಮೇಲೆ ದೇಶದ ಏಕತೆ-ಸಮಗ್ರತೆಯ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ. -ಜೈ ಹಿಂದ್,…ಜೈ ಕರ್ನಾಟಕ ಮಾತೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button