7ನೇ ವೇತನ ಆಯೋಗದ ವರದಿ ಜಾರಿ: ನಾಳೆಯೇ ಸರಕಾರದ ಬದ್ಧತೆ ಬಹಿರಂಗ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಸಂಬಂಧ ಶುಕ್ರವಾರವೇ ರಾಜ್ಯ ಸರಕಾರದ ಬದ್ದತೆ ಗೊತ್ತಾಗಲಿದೆ.

ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಕಾಯ್ದಿರಿಸಬೇಕಾಗುತ್ತದೆ.

7ನೇ ವೇತನ ಆಯೋಗ ಮಾರ್ಚ್ ಅಂತ್ಯದೊಳಗೆ ವರದಿ ನೀಡಲಿದೆ. ಏಪ್ರಿಲ್ ನಿಂದಲೇ ಅದು ಜಾರಿಯಾಗಬೇಕಿದೆ. ಇಲ್ಲವಾದಲ್ಲಿ ಮಧ್ಯಂತರ ಪರಿಹಾರ ನೀಡಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರು ಬಹು ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ಭವಿಷ್ಯ ಶುಕ್ರವಾರದ ಬಜೆಟ್ ನಲ್ಲಿ ಸ್ವಲ್ಪಮಟ್ಟಿಗೆ ಗೊತ್ತಾಗಲಿದೆ.

7ನೇ ವೇತನ ಆಯೋಗದ ಸಮಗ್ರ ಮಾಹಿತಿ ಇಲ್ಲಿದೆ; ಗುರುವಾರ ನೌಕರರ ಸಂಘದಿಂದ ಸಿಎಂಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮ

https://pragati.taskdun.com/7th-pay-commission-order/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button