Latest

7ನೇ ವೇತನ ಆಯೋಗಕ್ಕೆ ಸಿಕ್ಕಿತು ಕಚೇರಿ; 44 ಸಿಬ್ಬಂದಿಯೊಂದಿಗೆ ಕಾರ್ಯಾರಂಭ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸುಮಾರು 12 ಲಕ್ಷ ಸರಕಾರಿ/ ಅರೆ ಸರಕಾರಿ/ ನಿಗಮ ಮಂಡಳಿ ನೌಕರರು ಹಾಗೂ ನಿವೃತ್ತ ಸಿಬ್ಬಂದಿ ಬಹು ದಿನಗಳಿಂದ ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗಕ್ಕೆ ಕೆಲವು ದಿನಗಳ ಹಿಂದಷ್ಟೆ 44 ಸಿಬ್ಬಂದಿ ಒದಗಿಸಲಾಗಿದ್ದು, ಇದೀಗ ಸುಸಜ್ಜಿತ ಕಚೇರಿಯೂ ಲಭ್ಯವಾಗಿದೆ.

ಇದರಿಂದಾಗಿ ಇನ್ನೇನು 2 -3 ದಿನದಲ್ಲೇ ಆಯೋಗ ಅಧಿಕೃತವಾಗಿ ತನ್ನ ಕೆಲಸವನ್ನು ಆರಂಭಿಸಲಿದೆ.

ಬೆಂಗಳೂರಿನಲ್ಲಿರುವ ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದ 3ನೇ ಮಹಡಿಯಲ್ಲಿ 2500 ಚದರ್ ಅಡಿ ಜಾಗದಲ್ಲಿ ವೇತನ ಆಯೋಗದ ಕಚೆರಿ ಕಾರ್ಯಾರಂಭ ಮಾಡಲಿದೆ.  ಸೂಕ್ತವಾದ ಬಾಡಿಗೆಯನ್ನೂ ಪಾವತಿಸಬೇಕಿದೆ.

ಅಧ್ಯಕ್ಷರು, ಸದಸ್ಯರ ಜೊತೆಗೆ ಒಟ್ಟೂ 44 ಸಿಬ್ಬಂದಿ ನೀಡಲಾಗಿದ್ದು, ಸೋಮವಾರ ಅಥವಾ ಮಂಗಳವಾರ ಕಚೇರಿಯೊಂದಿಗೆ ಆಯೋಗ ಅಧಿಕೃತವಾಗಿ ತನ್ನ ಕಾರ್ಯ ಆರಂಭಿಸಲಿದೆ.

ಆಯೋಗಕ್ಕೆ 6 ತಿಂಗಳ ಗಡುವು ನೀಡಲಾಗಿದ್ದು, ಅಷ್ಟರೊಳಗೆ ತನ್ನ ವರದಿ ನೀಡಲಿದೆ. ಏನೇ ಆದರೂ 2023ರ ವಿಧಾನ ಸಭೆ ಚುನಾವಣೆ ನಡೆದು ಹೊಸ ಸರಕಾರ ಬಂದ ಬಳಿಕವಷ್ಟೇ ಹೊಸ ವೇತನ ಶ್ರೇಣಿ ಜಾರಿಯಾಗಲಿದೆ.

 

7ನೇ ವೇತನ ಆಯೋಗದ ಅವಧಿ, ಕಾರ್ಯವ್ಯಾಪ್ತಿ ಘೋಷಣೆ: ಮತ್ತೆ 3 ಸದಸ್ಯರ ನೇಮಕ

https://pragati.taskdun.com/approval-for-7th-pay-commission-appointment-of-three-more-members/

ಸಿಎಂ ಜೊತೆ 7ನೇ ವೇತನ ಆಯೋಗದ ಮಹತ್ವದ ಚರ್ಚೆ

https://pragati.taskdun.com/important-discussion-of-7th-pay-commission-with-cm/

7ನೇ ವೇತನ ಆಯೋಗದ ಸಮಗ್ರ ಮಾಹಿತಿ ಇಲ್ಲಿದೆ; ಗುರುವಾರ ನೌಕರರ ಸಂಘದಿಂದ ಸಿಎಂಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮ

https://pragati.taskdun.com/7th-pay-commission-order/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button