Kannada NewsKarnataka NewsLatest

*ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಬೀದಿ ನಾಯಿ ದಾಳಿ: ರಕ್ಷಿಸಲು ಹೋದ 7 ಜನರ ಮೇಲೂ ಅಟ್ಯಾಕ್*

ಪ್ರಗತಿವಾಹಿನಿ ಸುದ್ದಿ: ಜಾತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿ ದಾಳಿ ನಡೆಸುದ್ದು, ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಈ ಘಟನೆ ನಡೆದಿದೆ. ಬೇಲೂರಿನ ಜಿಹೆಚ್ ಪಿಎಸ್ ಶಾಲೆಯ ಶಿಕ್ಷಕಿ ಚಿಕ್ಕಮ್ಮ ಎಂಬುವವರು ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಮನೆಯೊಂದರ ಬಳಿ ತೆರಳುತ್ತಿದ್ದ ಶಿಕ್ಷಕಿ ಮೇಲೆ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿದೆ. ಶಿಕ್ಷಕಿಯ ಮುಖ, ಕೈ-ಕಾಲುಗಳನ್ನು ಕಚ್ಚಿ ಗಾಯಗೊಳಿಸಿದೆ. ಶಿಕ್ಷಕಿ ರಕ್ಷಿಸಲು ಬಂದ ಆಕೆಯ ಪತಿ ಹಾಗೂ ಓರ್ವ ಬಾಲಕ ಹಾಗೂ ಏಳು ಜನರ ಮೇಲೂ ನಾಯಿ ದಾಳಿ ನಡೆಸಿದೆ.

ಗಂಭೀರವಾಗಿ ದಾಳಿಗೊಳಗಾಗಿರುವ ಶಿಕ್ಷಕಿ, ಬಾಲಕ ಹಾಗೂ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button