7ನೇ ವೇತನ ಆಯೋಗ: ಮುಖ್ಯಮಂತ್ರಿಗಳ ಜೊತೆ ಸರಕಾರಿ ನೌಕರರ ಸಭೆ ಮುಕ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಖ್ಯಮಂತ್ರಿಗಳ ಜೊತೆ ರಾಜ್ಯ ಸರಕಾರಿ ನೌಕರರ ಸಂಘದ ಸಭೆ ಮುಕ್ತಾಯವಾಗಿದೆ. ಮುಖ್ಯಮಂತ್ರಿಗಳು ನೀಡಿರುವ ಭರವಸೆಗಳ ಕುರಿತು ರಾತ್ರಿಯೇ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಜ್ಯಾಧ್ಯಕ್ಷ ಛಡಕ್ಷರಿ ತಿಳಿಸಿದ್ದಾರೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ರಾತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನೌಕರರ ಸಂಘದ ಜೊತೆ ಸಭೆ ನಡೆಸಿದರು. 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೊಳಿಸಬೇಕು. ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ನೌಕರರ ಸಂಘ ಪಟ್ಟು ಹಿಡಿದು ಮುಷ್ಕರಕ್ಕೆ ಕರೆ ನೀಡಿದೆ.

 

Home add -Advt

ಮಧ್ಯಾಹ್ನ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಅದು ವಿಫಲವಾದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಮೊದಲು ಸಚಿವರ ಜೊತೆ ಸಭೆ ನಡೆಸಿದರು. ಸಚಿವರಾದ ಆರ್.ಅಶೋಕ, ಡಾ.ಸುಧಾಕರ, ಅರಗ ಜ್ಞಾನೇಂದ್ರ, ಶ್ರೀರಾಮುಲು ಮೊದಲಾದವರು ಸಭೆಯಲ್ಲಿದ್ದರು. ನಂತರ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಚರ್ಚಿಸಲಾಗಿರುವ ವಿಷಯಗಳ ಕುರಿತು ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ರಾತ್ರಿಯೇ ಚರ್ಚಿಸುತ್ತೇವೆ. ನಂತರ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಷಡಕ್ಷರಿ ತಿಳಿಸಿದ್ದಾರೆ.

ಹಾಗಾಗಿ ಮುಷ್ಕರ ನಡೆಯುತ್ತೋ ಇಲ್ಲವೋ ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿದೆ ಮುಂದುವರಿದಿದೆ. ಸರಕಾರದ ಆದೇಶ ಹೊರಬೀಳುವವರೆಗೂ ಮಷ್ಕರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಷಡಕ್ಷರಿ ತಿಳಿಸಿದರು.

 

ಈ ಹಿಂದಿನ ಸಂಬಂಧಿಸಿದ ಸುದ್ದಿಗಳು: 

*ಸಂಧಾನ ಸಭೆ ವಿಫಲ; ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ಆರಂಭ*

https://pragati.taskdun.com/7th-pay-commissionstrikemarch-1st/

 

*ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಬಂದ್?*

https://pragati.taskdun.com/state-govt-employees7th-pay-commissioninterim-reportteachersprotest/

 

*7ನೇ ವೇತನ ಆಯೋಗದ ವರದಿ ಜಾರಿ: ಡಿ.ಕೆ.ಶಿವಕುಮಾರ್ ಭರವಸೆ*

https://pragati.taskdun.com/7th-pay-commissiond-k-shivakumarhasana-prajadhwani/

Related Articles

Back to top button