Kannada NewsKarnataka NewsLatest

*7ನೇ ವೇತನ ಆಯೋಗ ಭೇಟಿಯಾದ ಸಚಿವಾಲಯ ನೌಕರ ಸಂಘ; ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 7ನೇ ವೇತನ ಆಯೋಗದ ಸದಸ್ಯರನ್ನು ಭೇಟಿಯಾದ ರಾಜ್ಯ ಸರ್ಕಾರದ ಸಚಿವಾಲಯ ನೌಕರರ ಸಂಘ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದೆ.

ಕೇಂದ್ರ ಸರ್ಕಾರದ ಕಚೇರಿಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ವಾರದಲ್ಲಿ 5 ದಿನ ಕೆಲಸದ ದಿನ ಪದ್ಧತಿ ಜಾರಿ, ಎನ್ ಪಿಎಸ್ ರದ್ದು ಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿ, ಕನಿಷ್ಠ ಮೂಲ ವೇತನವನ್ನು 17,000 ರೂಪಾಯಿಯಿಂದ 35,000 ರೂಪಾಯಿಗೆ ನಿಗದಿ, ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನ ಸೇರಿದಂತೆ ಹಲವು ಮಹತ್ವದ ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ.

ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ ನೇತೃತ್ವದ ನಿಯೋಗ ಆಯೋಗದ ಸದಸ್ಯರಾದ ಪಿ.ಬಿ.ರಾಮಮೂರ್ತಿ, ಶ್ರೀಕಾಂತ್ ಹೊನ್ನಳ್ಳಿ, ಹಾಗೂ ಕಾರ್ಯದರ್ಶಿ ಹೆಪ್ಸಬಾ ರಾಣಿ ಕೊರ್ಲಪಟಿ ಅವರನ್ನು ಭೇಟಿಯಾಗಿ ಹಕ್ಕೊತ್ತಾಯದ ಪಟ್ಟಿ ಸಲ್ಲಿಸಿದರು.

ಸಚಿವಾಲಯ ಸೇವೆಯ ಎಲ್ಲಾ ವೃಂದದವರಿಗೂ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಮಾಡಬೇಕು, ಮುಖ್ಯಮಂತ್ರಿಗಳು ಹಾಗೂ ಸಚಿವರ ಆಪ್ತ ಶಾಖೆಯಲ್ಲಿ ಸಚಿವಾಲಯ ಅಧಿಕಾರಿ, ನೌಕರರನ್ನು ಶೇ.50ರಷ್ಟು ನಿಯೋಜಿಸಬೇಕು. ಅಧಿವೇಸನದ ಭತ್ಯೆಯನ್ನು ದಿನಕ್ಕೆ 500 ರೂಪಾಯಿಯಿಂದ 1000 ರೂಗೆ ಹೆಚ್ಚಿಸಬೇಕು, ಉಪಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಗೃಹಪರಿಚಾರಕ ಭತ್ಯೆಯನ್ನು ಮಾಸಿಕ 11,000 ನಿಗದಿ ಮಾಡಬೇಕು ಎಂದು ಸಂಘ ನಿಯೋಗಕ್ಕೆ ಮನವಿ ಮಾಡಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button