Latest

*7ನೇ ವೇತನ ಆಯೋಗ; ಸಿಎಂ ಧೋರಣೆಯಿಂದ ಸರ್ಕಾರಿ ನೌಕರರಿಗೆ ಬೇಸರ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: 7ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಧರಣಿಗೆ ನಿರ್ಧರಿಸಿದ್ದಾರೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಷಡಕ್ಷರಿ ಅವರು, 7ನೇ ವೇತನ ಆಯೋಗದ ವರದಿ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ಆರಂಭಿಸುತ್ತೇವೆ. ಈ ಬಗ್ಗೆ ಎಲ್ಲಾ ಸರ್ಕಾರಿ ನೌಕರರು ತೀರ್ಮಾನಿಸಿದ್ದಾರೆ ಎಂದರು.

ಸಿಎಂ ಬಸವರಾಜ್ ಬೊಮ್ಮಾಯಿ ಅವರ ಧೋರಣೆಯಿಂದ 9 ಲಕ್ಷ ನೌಕರರಿಗೆ ಬೇಸರ ಆಗಿದೆ. ಸರ್ಕಾರ ಕೂಡಲೇ 7ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

*ಸಿದ್ದರಾಮಯ್ಯನವರಿಗೆ ಕಟುಸತ್ಯ ಎದುರಿಸಬೇಕಾದ ಕಾಲ ಬಂದಿದೆ; ಸಿಎಂ ಬೊಮ್ಮಾಯಿ ತೀಕ್ಷ್ಣ ಪ್ರತಿಕ್ರಿಯೆ*

Home add -Advt

https://pragati.taskdun.com/cm-basavaraj-bommaireactionsiddaramaiaharkavati-rydoo-case/

Related Articles

Back to top button