ಪ್ರಗತಿ ವಾಹಿನಿ ಸುದ್ದಿ ಪಾಟ್ನಾ –
ಚಿನ್ನ, ಬೆಳ್ಳಿ, ಒಡವೆ, ಹಣ, ಪಾತ್ರೆ ಪಗಡೆ ಹೀಗೆ ಕಳ್ಳರು ನಾನಾ ವಸ್ತುಗಳನ್ನು ಕದಿಯುವ ವಿಷಯ ಗೊತ್ತೇ ಇದೆ. ಆದರೆ ಬಿಹಾರದ ರೋಹ್ತಾಸ್‌ನಲ್ಲಿ ಕಳ್ಳರು ೬೦ ಅಡಿಯ ಸೇತುವೆಯನ್ನೇ ಕಳುವು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ರೋಹ್ತಾಸ್‌ನಲ್ಲಿ ಬಳಕೆಯಾಗದ ಹಳೆಯ ಸೇತುವೆಯೊಂದು ಇತ್ತು. ಅದರಲ್ಲಿ ಅಪಾರ ಪ್ರಮಾಣದ ಕಬ್ಬಿಣದ ರಾಡ್‌ಗಳು, ತೊಲೆಗಳಿದ್ದವು. ಇತ್ತೀಚೆಗೆ ೮ ಜನ ಕಳ್ಳರ ತಂಡ ಎರಡು ದಿನಗಳ ಕಾರ್ಯಾಚರಣೆ ನಡೆಸಿ ಜೆಸಿಬಿ ಬಳಸಿ ಸೇತುವೆಯನ್ನೇ ಕದ್ದಿದ್ದರು. ಕಳ್ಳರ ತಂಡದಲ್ಲಿ ಓರ್ವ ಸಬ್ ಡಿವಿಷನಲ್ ಅಧಿಕಾರಿಯೂ ಶಾಮೀಲಾಗಿದ್ದಾನೆ.
ರೋಹ್ತಾಸ್ ಪೊಲೀಸರು ಅಧಿಕಾರಿ ಸೇರಿದಂತೆ ಎಲ್ಲ ೮ ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ೨೪೭ ಕಿಲೋ ಕಬ್ಬಿಣ, ಜೆಸಿಬಿ ಮತ್ತಿತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸದೆ ಸುಮಲತಾ ಬಿಜೆಪಿ ಸೇರ್ತಾರಾ? CM ಬೊಮ್ಮಾಯಿ ಜೊತೆ ಚರ್ಚಿಸಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ