Kannada NewsKarnataka NewsLatest

ಸವದತ್ತಿ ಯಲ್ಲಮ್ಮನಿಗೆ 8 ಕೋಟಿ ರೂ. ನಷ್ಟ

ಪ್ರಗತಿವಾಹಿನಿ ಸುದ್ದಿ,  ಉಗರಗೋಳ(ತಾ.ಸವದತ್ತಿ)–  ಶ್ರೀಕ್ಷೇತ್ರ ಏಳುಕೋಳ್ಳದ ಶ್ರೀ ರೇಣುಕಾ ಯಲ್ಲಮ್ಮನ   ದೇವಸ್ಥಾನಕ್ಕೆ ಬರುವಂತ ಭಕ್ತರಿಗೆ ಸೆಪ್ಟಂಬರ್ 30ರ ವರೆಗೆ ದರ್ಶನಕ್ಕೆ ಅವಕಾಶ ಇಲ್ಲದಿರುವ ಕಾರಣ ಭಕ್ತರು ಸಹಕರಿಸಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಭಕ್ತರಿಲ್ಲದೆ ಭಣಗುಡುತ್ತಿರುವ ಶ್ರೀಯಲ್ಲಮ್ಮನ ದೇವಸ್ಥಾನ.

ಶ್ರೀಕ್ಷೇತ್ರ ಶ್ರೀರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಕರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಪ್ರಾರ್ಥಿಸಿ ಶ್ರೀರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ದೇಶದ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸುವ ಹಿನ್ನೆಲೆ, ಭಕ್ತರ ಹಿತ ದೃಷ್ಟಿಯಿಂದ ಇನ್ನೂ ಒಂದು ತಿಂಗಳ ಕಾಲ ದೇವಸ್ಥಾನ ಬಂದ್ ಇದ್ದು, ಭಕ್ತರು ದೇವಸ್ಥಾನಕ್ಕೆ ಬರದೆ ಮನೆಯಲ್ಲಿಯೇ ದೇವರನ್ನು ನೇನೆಯಬೇಕು ಎಂದರು.

ಮುಂದೆ ಬರುವ ದಿನಗಳಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು ಮತ್ತು ಭಕ್ತರಿಗೋಸ್ಕರವಾಗಿ ದೇವಸ್ಥಾನದಲ್ಲಿ ಪ್ರಾರಂಭಿಸಿದ ೨೬೫ ರೂಂಗಳನ್ನು ಆದಷ್ಟು ಬೇಗ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ ಶ್ರೀರೇಣುಕಾ ಯಲ್ಲಮ್ಮನಿಗೆ ಎಂದಿನಂತೆ ದಿನನಿತ್ಯ ಅಭಿಷಕ, ವಿಶೇಷ ಪೂಜೆ, ವಿಧಿ ವಿಧಾನಗಳು ಜರಗುತ್ತವೆ, ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಇಂದಿನವರೆಗೆ ದೇವಸ್ಥಾನಕ್ಕೆ ಸುಮಾರು ೮ ಕೋಟಿ ರೂ ನಷ್ಟವಾಗಿದೆ ಎಂದರು.

ದೇವಸ್ಥಾನದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ದರಿಸುವದು, ಸ್ಯಾನಿಟೈಜೆರ ಕಡ್ಡಾಯಗೋಳಿಸಲಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ, ವೆಂಕಟ ಸೂನ್ನದ, ಸವದತ್ತಿ ಎ ಎಸ್ ಆಯ್ ಎಸ್ ಆರ್ ಗಿರಿಯಾಲ, ರಾಮಾಚಾರಿ ಲಮಾಣಿ, ಸದಾನಂದ ಈಟಿ, ಈರಣ್ಣಾ ಕುಲಕರ್ಣಿ, ಪಂಡಿತ ರಾಜಶೇಖರಯ್ಯ, ಮಂಜನಗೌಡ ಸಂದಿಮನಿ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button