Latest

ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ವಿಕಾಸಗೊಳ್ಳಬೇಕು : ಸಂಗಮೇಶ ನಿರಾಣಿ

ರೈತ ಕುಟುಂಬದ ಆರೋಗ್ಯ ರಕ್ಷಣೆಯೆ ಆರೋಗ್ಯಬಂಧು ಹೆಲ್ತ್‌ಕಾರ್ಡ್ ಮೂಲಮಂತ್ರ

 

ಪ್ರಗತಿವಾಹಿನಿ ಸುದ್ದಿ, ಮುಧೋಳ:  ರೈತರಿಗೆ ಅನುಕೂಲ ಕಲ್ಪಿಸುವುದು ನಿರಾಣಿ ಉದ್ಯಮ ಸಮೂಹದ ಮುಖ್ಯ ಧ್ಯೇಯವಾಗಿದೆ ಎಂದು ಎಂ.ಆರ್.ಎನ್. (ನಿರಾಣಿ) ಉದ್ಯಮ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಅವರು ಗುಲಗಾಲ ಜಂಬಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಬ್ಬು ಬೆಳೆ ವಿಚಾರ ಸಂಕೀರಣ ಹಾಗೂ ಆರೋಗ್ಯ ಬಂಧು ಹೆಲ್ತ್‌ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Home add -Advt

ಪ್ರತಿ ರೈತ ಕುಟುಂಬಗಳು ಸದೃಢವಾಗಿ ಬೆಳೆಯಬೇಕು ಹಾಗೂ ಆರೋಗ್ಯವಂತರಾಗಿರಬೇಕು ಎಂಬುದು ಮುರುಗೇಶ ನಿರಾಣಿಯವರ ಆಶಯವಾಗಿದೆ. ಈ ನಿಟ್ಟಿನಲ್ಲಿ ನಿರಾಣಿ ಫೌಂಡೇಶನ್ ಮೂಲಕ ಆರೋಗ್ಯ ಯೋಜನೆ ಜಾರಿಗೆ ತರಲಾಗಿದೆ. ರೈತ ವೃತ್ತಿಯಲ್ಲಿ ಹೊಸತನ ತಂದುಕೊಳ್ಳಬೇಕು. ಆಧುನಿಕ ಮಾದರಿಯಲ್ಲಿ ಬೇಸಾಯ ಮಾಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಉತ್ತಮ ಇಳುವರಿ ಪಡೆಯುವುದು ಅವಶ್ಯಕವಾಗಿದೆ ಎಂದರು.
ನೀರು, ಕೃಷಿ ಹಾಗೂ ಕೃಷಿ ಆಧಾರಿತ ಉದ್ಯಮಗಳು ಆಧುನಿಕ ಭಾರತದ ದೇವಾಲಯಗಳಿದ್ದಂತೆ. ನಮ್ಮ ರೈತರು ವೈಜ್ಞಾನಿಕ ಪದ್ದತಿಯನ್ನು ಅನುಸರಿಸಿದರೆ ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ಬೆಳವಣಿಗೆಗೊಳ್ಳುತ್ತದೆ. ಇದರಿಂದ ರೈತ ಮತ್ತು ದೇಶದ ಆದಾಯವನ್ನು ದ್ವಿಗುಣಗೊಳಿಸಲು ಅವಕಾಶವಿದೆ ಎಂದರು.
ವಿಚಾರ ಸಂಕಿರಣದಲ್ಲಿ ಬೆಳಗಾವಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಪ್ರೊ. ಎನ್. ಆರ್. ಯಕ್ಕೇಲಿ ಹಾಗೂ ಡಾ. ಮಂಜುನಾಥ ಚೌರಡ್ಡಿ ರೈತರಿಗೆ ತರಬೇತಿ ನೀಡಿದರು, ವೆಂಕಣ್ಣ ಗಿಡ್ಡಪ್ಪನವರ, ಸುಗುರಪ್ಪ ಅಕ್ಕಿಮರಡಿ, ಸದಾಶಿವ ಮುಳ್ಳೂರ, ಗುರುಲಿಂಗಪ್ಪ ರಾಮತೀರ್ಥ, ಸಂಗಪ್ಪ ಬಟಕುರ್ಕಿ, ಬಸವರಾಜ ಬಸರಡ್ಡಿ, ಎನ್. ವಿ. ಪಡಿಯಾರ ಉಪಸ್ಥಿತರಿದ್ದರು.

 

https://pragati.taskdun.com/karnataka-news/sanitizer-tunnel-construction-in-nirani-sugar/

Related Articles

Back to top button