Latest

ಪೆಟ್ರೋಲ್, ಡೀಸೆಲ್ ಪೈಪ್‌ಲೈನ್‌ಗೆ ರಂಧ್ರ ಕೊರೆದ ಕಳ್ಳರು

ಪ್ರಗತಿವಾಹಿನಿ ಸುದ್ದಿ ಸೂರತ್: 8 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಕಳುವು ಮಾಡಿದ ಘಟನೆ ಸೂರತ್ ಬಳಿ ನಡೆದಿದೆ.

ಪೆಟ್ರೋಲ್ ಮತ್ತು ಡೀಸೆಲ್‌ನ ಸಮರ್ಪಕ ಪೂರೈಕೆಗೆ ಅಂಡರ್ ಗ್ರೌಂಡ್ ಪೈಪ್ ಲೈನ್ ಮಾಡಲಾಗುತ್ತಿದ್ದರೆ ಕಳ್ಳರು ಇಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಸೂರತ್‌ನ ಒಲ್ಪಾಡಾ ತಾಲೂಕಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿ. ಗೆ ಸೇರಿದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯ ಪೈಪ್ ಲೈನ್ ಗೆ ಕನ್ನ ಹಾಕಿದ ಕಳ್ಳರು ಒಟ್ಟು 8.52 ಲಕ್ಷ ಮೌಲ್ಯದ ಇಂಧನ ಕಳುವು ಮಾಡಿದ್ದಾರೆ ಎಂದು ಐಒಸಿಎಲ್‌ನ ಅಧಿಕಾರಿ ಶಹನವಾಜ್ ಕಟಾರಿಯಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ನೆಲ ಅಗೆದು ಇಂಧನ ಕದ್ದರು

ಇಂಧನ ಪೂರೈಕೆಯ ಪೈಪ್‌ಲೈನ್ ಕೃಷಿ ಭೂಮಿಯ ಮೂಲಕವೂ ಹಾದು ಹೋಗಿದೆ. ಹಿತೇಂದ್ರ ಸಿಂಗ್ ಎಂಬುವವರಿಗೆ ಸೇರಿದ ಹೊಲದಲ್ಲಿ ಕಳ್ಳರು ನೆಲ ಅಗೆದು ಪೈಪ್‌ಲೈನ್‌ಗೆ ಕನ್ನ ಹಾಕಿದ್ದಾರೆ. ಪೈಪ್ ಲೈನ್‌ಗೆ ರಂಧ್ರ ಕೊರೆದು ಅದಕ್ಕೆ ವಾಲ್ವ್ ಅಳವಡಿಸಿ ಪೆಟ್ರೋಲ್ ಮತ್ತು ಡೀಸೆಲ್ ಕಳುವು ಮಾಡಲಾಗಿದೆ. ಕಳುವು ಮಾಡಲಾದ ಸ್ಥಳದಲ್ಲಿ ಮೊಬೈಲ್ ಫೋನ್ ಒಂದು ದೊರೆತಿದೆ ಎಂದು ವರದಿಯಾಗಿದೆ.

ಪೊಲೀಸರು ಐಪಿಸಿ ಸೆಕ್ಷನ್ 379, 285, 427 ಮತ್ತು 120 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಗರ್ಭಿಣಿ ಮಹಿಳೆಗೆ ಬೆಂಕಿ ಹಚ್ಚಿದ ದುರುಳರು
ಚೆನ್ನೈ ಸೂಪರ್ ಕಿಂಗ್ಸ್ ತ್ರೀ ಈಡಿಯೆಟ್ಸ್ ನ ಮೆಮೆ ಶೇರ್ ಮಾಡಿದ ವೀರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button