Latest

ಗರ್ಭಿಣಿ ಮಹಿಳೆಗೆ ಬೆಂಕಿ ಹಚ್ಚಿದ ದುರುಳರು

ಪ್ರಗತಿವಾಹಿನಿಸುದ್ದಿ ಪಾಟ್ನಾ: ಆಸ್ತಿ ವಿವಾದಕ್ಕೆ ಸಂಬಂಧಿಸದಂತೆ 8 ತಿಂಗಳ ಗರ್ಭಿಣಿ ಸೇರಿ ಮೂವರಿಗೆ ಬೆಂಕಿ ಹಚ್ಚಿ ಗಾಯಗೊಳಿಸಿದ ದಾರುಣ ಘಟನೆ ಬಿಹಾರದ ದರ್ಬಾಂಗಾ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡಿದ್ದ ಓರ್ವ ಯುವತಿ ಚೇತರಿಸಿಕೊಂಡಿದ್ದು ಗರ್ಭಿಣಿ ಮಹಿಳೆ ಮತ್ತು ಆಕೆಯ ಸಹೋದರ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಸಂಜಯ್ ಝಾ (31) ಪಿಂಕಿ (36) ಹಾಗೂ ನಿಕ್ಕಿ ಕುಮಾರಿ (20) ಗಾಯಗೊಂಡವರು. ನಿಕ್ಕಿ ಕುಮಾರಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. 8 ತಿಂಗಳ ಗರ್ಭಿಣಿಯಾಗಿರುವ ಪಿಂಕಿ ಮತ್ತು ಸಂಜಯ್ ಅವರ ದೇಹದ ಶೇ.80ರಷ್ಟು ಸುಟ್ಟಿದೆ. ಅವರನ್ನು ಪಾಟ್ನಾ ವೈದ್ಯಕೀಯ ವಿದ್ಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

Home add -Advt

ಆಸ್ತಿ ವಿವಾದ

ಬೆಂಕಿ ಗಾಯಕ್ಕೆ ಒಳಗಾದ ಸಂತ್ರಸ್ತರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಅವರು ಕಳೆದ 40 ವರ್ಷಗಳಿಂದ ಇದ್ದ ಮನೆಯನ್ನು 2017ರಲ್ಲಿ ಶಿವಕುಮಾರ್ ಝಾ ಎಂಬುವವರು ಬೇರೊಬ್ಬರಿಂದ ಅನಧೀಕೃತವಾಗಿ ಖರೀದಿಸಿದ್ದರು.

ಆದರೆ ಇದು ನಮ್ಮ ಆಸ್ತಿಯಾಗಿದ್ದು ಪ್ರಕರಣ ಪಾಟ್ನಾ ಹೈ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಆದರೆ ಶಿವಕುಮಾರ ಝಾ ಕಡೆಯವರು ಪದೇ ಪದೆ ಕಿರುಕುಳ ನೀಡುತ್ತ ಬಂದಿದ್ದಾರೆ. ಅವರಿಂದ ನಮ್ಮ ಪ್ರಾಣಕ್ಕೆ ಆತಂಕವಿದ್ದ ಹಿನ್ನೆಲೆಯಲ್ಲಿ ಕಳೆದ ಗುರುವಾರವಷ್ಟೇ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ರಕ್ಷಣೆ ಒದಗಿಸುವಂತೆ ಕೋರಿದ್ದೆವು. ಶುಕ್ರವಾರ ಏಕಾಏಕಿ ಬುಲ್‌ಡೋಸರ್ ತಂದು ಮನೆಯನ್ನು ಕೆಡವಲು ಪ್ರಯತ್ನ ನಡೆದಿತ್ತು. ಅದನ್ನು ವಿರೋಧಿಸಿದಾಗ ನಮ್ಮ ಮೇಲೆ ಹಲ್ಲೆ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ನಿಕ್ಕಿ ಕುಮಾರಿ ಆರೋಪಿಸಿದ್ದಾರೆ.

ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿದ್ದೇವೆ. ಸಿಸಿ ಟಿವಿ ಫುಟೇಜ್ ಲಭ್ಯವಾಗಿದ್ದು, ಬೆಂಕಿ ಹಚ್ಚಿ ಹಲ್ಲೆ ಮಾಡಿದವರ ಶೋಧ ನಡೆದಿದೆ ಎಂದು ದರ್ಭಾಂಗಾ ಎಸ್‌ಪಿ ಅಶೋಕ್ ಪ್ರಸಾದ್ ಹೇಳಿದ್ದಾರೆ.

ಶಾಸಕ ರಘುಪತಿ ಭಟ್ ಗೆ ಜೀವ ಬೆದರಿಕೆ ಕರೆ
ಮತ್ತೊಂದು ವಿಚಿತ್ರ ಬಟ್ಟೆಯಲ್ಲಿ ಉರ್ಫಿ; ಫ್ಯಾಷನ್ ಡಿಸಾಸ್ಟರ್ ಎಂದು ಕಾಲೆಳೆದ ನೆಟ್ಟಿಗರು

Related Articles

Back to top button