Latest

ಚೆನ್ನೈ ಸೂಪರ್ ಕಿಂಗ್ಸ್ ತ್ರೀ ಈಡಿಯೆಟ್ಸ್ ನ ಮೆಮೆ ಶೇರ್ ಮಾಡಿದ ವೀರು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಐಪಿಎಲ್ ಹರಾಜಿನ ಮೇಲೆ ವಿಶ್ವಾದ್ಯಂತ ಕ್ರಿಕೇಟ್ ಪ್ರೇಮಿಗಳು ಕಣ್ಣು ನೆಟ್ಟಿದ್ದಾರೆ. ಕೆಲವು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಎಲ್ಲ ತಂಡಗಳೂ ಈಗಾಗಲೇ ತಮ್ಮ ತಂಡಗಳಲ್ಲಿ ಆಡಿದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ.

ಅಂತೆಯೇ ತಂಡಗಳ ಬೆನ್ನುತಟ್ಟುವ, ತಂಡಗಳ ಬಲವನ್ನು ಹಾಡಿಹೊಗಳುವ ಪ್ರಕ್ರಿಯೆ ಜೋರಾಗಿ ನಡೆದಿದೆ. ಇದರಲ್ಲಿ ಬಾಲಿವುಡ್ ನಟರೂ ಹೊರತಾಗಿಲ್ಲ. ತಮ್ಮ ತಮ್ಮ ಫೇವರಿಟ್ ತಂಡಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮೆಮೆಗಳನ್ನು ಪೋಸ್ಟ್ ಮಾಡುವ ಮೂಲಕ ಬೆಂಬಲ ನೀಡುತ್ತಿದ್ದಾರೆ.

Home add -Advt

ಇದೇ ಮಾದರಿಯಲ್ಲಿ ಟೀಂ ಇಂಡಿಯಾದ ಮಾಜಿ ಓಪನರ್, ಸ್ಪೋಟಕ ಬ್ಯಾಟಿಂಗ್‌ನಿಂದ ಖ್ಯಾತರಾದ ವೀರೇಂದ್ರ ಸೆಹ್ವಾಗ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಮೆಮೆ ಗಮನ ಸೆಳೆದಿದೆ.

ಅವರು ಅಮೀರ್ ಖಾನ್ ಅಭಿನಯದ ಪ್ರಸಿದ್ಧ ಚಲನಚಿತ್ರ ತ್ರಿ ಈಡಿಯೆಟ್ಸ್ ನ ಹಾಡೊಂದರ ಮೆಮೆಯನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಚಿತ್ರದಲ್ಲಿ ಅಮೀರ್ ಖಾನ್ ಗೆಳೆಯನ ಪ್ರಾಣ ಉಳಿಸಲು ಸ್ಕೂಟಿಯ ಮೇಲೆ ಜೋರಾಗಿ ತೆರಳುವಾಗ ಹಿನ್ನೆಲೆಯಲ್ಲಿ ಬಿತ್ತರವಾಗುವ ಜಾನೆ ನಹಿ ದೇಂಗೆ ತುಜೆ, ಜಾನೆ ತುಜೆ ದೇಂಗೆ ನಹಿ ಹಾಡಿನ ಮೆಮೆ ಹಾಕಿದ್ದಾರೆ. ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈ ಮೊದಲಿನ ಪಂದ್ಯಗಳಲ್ಲಿ ಆಡಿರುವ ರಾಬಿನ್ ಉತ್ತಪ್ಪ, ಡ್ವೇನ್ ಬ್ರಾವೊ, ಅಂಬಾಟಿ ರಾಯುಡು ಮತ್ತು ದೀಪಕ್ ಚಹಲ್ ಅವರನ್ನು ಈ ಬಾರಿಯೂ ಉಳಿಸಿಕೊಂಡಿದ್ದು ತಂಡ ಬಲಿಷ್ಠವಾಗಿದೆ ಎಂದು ವೀರು ಪ್ರತಿಪಾದಿಸಿದ್ದಾರೆ.

ಐಪಿಎಲ್ ಹರಾಜು ಪ್ರಕ್ರಿಯೆ ಆರಂಭ; ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲು?

Related Articles

Back to top button