Kannada NewsKarnataka NewsLatest

*BREAKING: ಬೆಳ್ಳಂಬೆಳಿಗ್ಗೆ ಮಂಗಳೂರು ಬಂದರಿಗೆ ಭೇಟಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಳ್ಳಂಬೆಳಿಗ್ಗೆ ಮಂಗಳೂರು ಬಂದರಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು.

ಮಂಗಳೂರಿನ ಬಂದರು ಬಳಿ ಇರುವ ದಕ್ಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರ್. ಮೀನುಗಾರರ ಹಡಗು ನಿಲ್ಲುವ ಸ್ಥಳಕ್ಕೆ ದಕ್ಕೆ ಎಂದು ಕರೆಯುತ್ತಾರೆ. ಸಮುದ್ರದಿಂದ ಬಂದ ತಾಜ ಮೀನುಗಳನ್ನು ವೀಕ್ಷಿಸಿದರು. ಇದೇ ವೇಳೆ ಆಗತಾನೆ ಸಮುದ್ರದಿಂದ ಬಂದಿದ್ದ ಕಿಂಗ್ ಫಿಶ್ ಎಂಬ ಬೃಹತ್ ಮೀನನ್ನು ಕೈಯಲ್ಲಿ ಹಿಡಿದು ಸಿಎಂ ಅಚ್ಚರಿಪಟ್ಟರು.

ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೀನುಗಾರರು ಜೈಯಕಾರ ಹಾಕಿದರು. ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಡಿ.ಕೆ.ಶಿವಕುಮಾರ್ ಪಾತ್ರರಾಗಿದ್ದಾರೆ.

ಇದೇ ವೇಳೆ ಮೀನುಗಾರರ ಸಂಕಷ್ಟ, ಸಮಸ್ಯೆಗಳನ್ನು ಆಲಿಸಿದ ಸಿಎಂ, ಮೀನುಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಮೀನುಗಾರಿಕಾ ಬೋಟ್ ನಲ್ಲಿ ತೆರಳಿ ಕೆಲ ಕಾಲ ಸಮುದ್ರ ವೀಕ್ಷಣೆ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button