Kannada NewsKarnataka NewsLatest

17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ ; ಮೇಲ್ವಿಚಾರಣಾಧಿಕಾರಿ ನೇಮಕ

17 ಜಿಲ್ಲೆಗಳ 80 ತಾಲೂಕು ಪ್ರವಾಹ ಪೀಡಿತ ; ಮೇಲ್ವಿಚಾರಣಾಧಿಕಾರಿ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಕರ್ನಾಟಕದ 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಸರಕಾರ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಈ ಎಲ್ಲ ತಾಲೂಕುಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಕೃತಿ ವಿಕೋಪ ಪರಿಹಾರ ನಿಯಮದನ್ವಯ ಪರಿಹಾರ ಕಾರ್ಯಾಚರಣೆ ನಡೆಯಲಿದೆ.

ಬೆಳಗಾವಿಯ 10 ತಾಲೂಕುಗಳು ಪ್ರವಾಹಪೀಡಿತ ಎಂದು ಘೋಷಿಸಲಾಗಿದ್ದು, ಇದರಲ್ಲಿ ಹೊಸ ತಾಲೂಕುಗಳಾಗಿರುವದನ್ನು ಪ್ರತ್ಯೇಕವಾಗಿ ಪರಿಗಣಿಸದೆ ಹಳೆಯ 10 ತಾಲೂಕುಗಳನ್ನೇ  ಪರಿಗಣಿಸಿದಂತಿದೆ.

ಬಾಗಲಕೋಟೆಯ 6, ರಾಯಚೂರಿನ 3, ಕಲಬುರ್ಗಿಯ 2, ಯಾದಗಿರಿಯ 3, ವಿಜಯಪುರದ 4, ಗದಗದ 3, ಹಾವೇರಿಯ 6, ಧಾರವಾಡದ 5, ಶಿವಮೊಗ್ಗದ 6, ಹಾಸನದ 3, ಚಿಕ್ಕಮಗಳೂರಿನ 4, ಕೊಡಗಿನ 3, ದಕ್ಷಿಣಕನ್ನಡದ 5, ಉಡುಪಿಯ 3, ಉತ್ತರಕನ್ನಡದ 11, ಮೈಸೂರಿನ 3 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.

 

ಮೇಲ್ವಿಚಾರಣಾಧಿಕಾರಿ ನೇಮಕ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ವೀಕ್ಷಿಸಲು ರಾಜ್ಯ ಸರಕಾರ ಹಿರಿಯ ಅಧಿಕಾರಿಗಳನ್ನು ಮೇಲ್ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಬೆಳಗಾವಿ ಮತ್ತು ಬಾಗಲಕೋಟೆಗೆ ಡಾ.ರಜನೀಶ್ ಗೋಯಲ್, ವಿಜಯಪುರ ಮತ್ತು ಕಲಬುರ್ಗಿಗೆ ಇ.ವಿ.ರಮಣರೆಡ್ಡಿ, ರಾಯಚೂರು ಹಾಗೂ ಯಾದಗಿರಿಗೆ ಮಹೇಂದ್ರ ಜೈನ್, ಉತ್ತರ ಕನ್ನಡ ಹಾಗೂ ಉಡುಪಿಗೆ ಸಂದೀಪ್ ದವೆ, ಹಾಸನ ಮತ್ತು ಕೊಡಗು ರಾಜಕುಮಾರ ಖತ್ರಿ, ಶಿವಮೊಗ್ಗಕ್ಕೆ ರಾಜೀವ ಚಾವ್ಲಾ ಉಸ್ತುವಾರಿ ಅಧಿಕಾರಿಗಳಾಗಿ ಕೆಲಸ ಮಾಡಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button