Latest

ದಶಕದ ಪ್ಲಾಪ್ ಪಟ್ಟಿಗೆ 83ರ ವಲ್ಡ್ ಕಪ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ರಣವೀರ್ ಸಿಂಗ್ ಅಭಿಯನದ ಬಹುನಿರೀಕ್ಷಿತ 83 ಸಿನೇಮಾ ಗಳಿಕೆಯಲ್ಲಿ ಇನ್ನಿಲ್ಲದಂತೆ ನೆಲಕಚ್ಚಿದ್ದು ಸಿನಿಪ್ರಿಯರಿಗೆ ಶಾಕ್ ನೀಡಿದೆ. ಸಿನೇಮಾ ದಶಕದ ಪ್ಲಾಪ್ ಪಟ್ಟಿಗೆ ಸೇರಿದ್ದು ನಿರ್ಮಾಪಕರು ನಿರ್ದೇಶಕ ಕಬೀರ್ ಖಾನ್‌ಗೆ ಆಘಾತ ಉಂಟುಮಾಡಿದೆ.

1983 ರಲ್ಲಿ ಕಪಿಲ್‌ದೇವ್ ನಾಯಕತ್ವದಲ್ಲಿ ಭಾರತ ಕ್ರಿಕೇಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆ ವಿಶ್ವಕಪ್‌ನಲ್ಲಿ ಭಾರತದ ಗೆಲವು ಇಡೀ ಕ್ರಿಕೇಟ್ ಜಗತ್ತಿಗೆ ಅನಿರೀಕ್ಷಿತ ಎಂಬAತಿತ್ತು. ಪ್ರಸ್ತುತ 1983ರ ವಿಶ್ವ ಕಪ್ ವಿಜಯವನ್ನು ಆಧರಿಸಿ ನಿರ್ಮಿಸಿದ ಸಿನೇಮಾ ಪ್ಲಾಪ್ ಆಗಿದ್ದು ಸಹ ಸಿನಿ ಜಗತ್ತಿಗೆ ಅಷ್ಟೇ ಅನಿರೀಕ್ಷತವಾಗಿದ್ದು ವಿಪರ್ಯಾಸ.

ಕ್ರಿಕೇಟ್ ತಾರೆಯರೂ ಪ್ರಚಾರ ಮಾಡಿದ್ದರು

83 ಸಿನೇಮಾಗೆ ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಹೂಡಿಕೆ ಮಾಡಿದ್ದರು. ಒಟ್ಟು 260 ಕೋಟಿ ರೂ. ನಲ್ಲಿ ಸಿನೇಮಾ ನಿರ್ಮಾಣವಾಗಿದೆ. ಆದರೆ ಡಿ.24ರಂದು ತೆರೆ ಕಂಡ ಬಳಿಕ ಸಿನೇಮಾ ಕೇವಲ 100 ಕೋಟಿ ಮಾತ್ರ ಗಳಿಸಲು ಶಕ್ಯವಾಗಿದೆ. ಇನ್ನು ಒಟಿಟಿ ಸೇರಿ 180 ಕೋಟಿಗೆ ಸೀಮಿತವಾಗಿದ್ದು ನಿರ್ಮಾಪಕರಿಗೆ ಸುಮಾರು 80 ಕೋಟಿ ನಷ್ಟವಾಗಿದೆ.

ಸಿನೇಮಾ ನಿಮಾರ್ಣ ಹಂತದಲ್ಲಿ ಬಹು ನಿರೀಕ್ಷೆ ಮೂಡಿಸಿತ್ತು. 83 ರ ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಕ್ರಿಕೇಟ್ ತಾರೆಯರು ಸಿನೇಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಟೀಸರ್ ಬಿಡುಗಡೆಯಾದಾಗ ಅಪಾರ ಮೆಚ್ಚುಗೆ ಗಳಿಸಿತ್ತು. ರಣಬೀರ್ ಸಿಂಗ್ ಅಭಿನಯದ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗಿತ್ತು. ಇಷ್ಟಾದರೂ ಸಿನೇಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದ್ದು ಅಚ್ಚರಿ ಉಂಟುಮಾಡಿದೆ.

ದಶಕದ ಪ್ಲಾಪ್ ಪಟ್ಟಿಗೆ ಸೇರಿದ ಬಾಲಿವುಡ್ ಸಿನೇಮಾಗಳಿವು

2011 ರಿಂದ 2021 ರ ಅವಧಿಯಲ್ಲಿ ಬಾಲಿವುಡ್‌ನ ಹಲವು ದೊಡ್ಡ ಬಜೆಟ್ ಸಿನೇಮಾಗಳನ್ನು ಪ್ರೇಕ್ಷಕರು ತಿರಸ್ಕರಿಸಿದ್ದಾರೆ. ರಣಬೀರ್ ನಟಿಸಿದ್ದ ಬಾಂಬೆ ವೆಲ್ವೆಟ್ , ಅಕ್ಷಯ್ ಕುಮಾರ್ ಅಭಿನಯದ ಜೋಕರ್, ಹೃತಿಕ್ ರೋಶನ್‌ರ ಮೆಹೆಂಜೊದಾರೊ, ರಂಗೂನ್, ಜಗ್ಗ ಜಾಸೂಸ್, ಕಳಂಕ್ ಮೊದಲಾದ ಸಿನೇಮಾಗಳು ಪ್ಲಾಪ್ ಆಗಿದ್ದವು. ಈ ಪಟ್ಟಿಗೆ ಈಗ 83 ಸಹ ಸೇರಿದೆ.
ಸಿಎಂ ಮನೆಗೆ ಭದ್ರತೆಗಿದ್ದ ಪೊಲೀಸರಿಂದಲೇ ಗಾಂಜಾ ಡೀಲ್; ಇಬ್ಬರು ಕಾನ್ಸ್ ಟೇಬಲ್ ಗಳು ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button