Kannada NewsLatest

ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಪತಿಯನ್ನೇ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಕ್ರಾಸ್ ಬಳಿ ನಡೆದಿದೆ.

ಬಚ್ಚನಕೇರಿ ಕ್ರಾಸ್ ಬಳಿ ಜನವರಿ 13ರಂದು ರಮೇಶ್ ಮಾದಿಗರ್ ಶವ ಪತ್ತೆಯಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಬಗ್ಗೆ ತಿಳಿದುಬಂದಿದೆ.

Home add -Advt

ಕೊಲೆಯಾದ ರಮೇಶ್ ಪತ್ನಿ ಶ್ರೀದೇವಿ (30), ಬಸವರಾಜ್ (20) ಬಂಧಿತ ಆರೋಪಿಗಳು. ಪತ್ನಿ ಶ್ರೀದೇವಿ ಹಾಗೂ ಬಸವರಾಜ್ ನಡುವಿನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ.

ಜನವರಿ 12ರಂದು ಶ್ರೀದೇವಿ ಪತಿ ರಮೇಶ್ ಗೆ ಮನೆಯಲ್ಲಿ ಫೋನ್ ಬಿಟ್ಟು ಹೋಗುವಂತೆ ಹೇಳಿದ್ದಳು. ಮನೆಯಲ್ಲಿಯೇ ಫೋನ್ ಇಟ್ಟು ಹಿರೇಬಾಗೆವಾಡಿಗೆ ಕಟ್ಟದಕಾಮಗಾರಿಗೆಂದು ತೆರಳಿದ್ದ ರಮೇಶ್ ನನ್ನು ಕೆಲಸದ ಸ್ಥಳದಲ್ಲಿ ಆರೋಪಿ ಬಸವರಾಜ್ ಭೇಟಿಯಾಗಿ ಕಿತ್ತೂರಿಗೆ ಹೋಗಿಬರೋಣ ಎಂದು ಹೇಳಿ ಕರೆದೊಯ್ದಿದ್ದ. ಬಳಿಕ ಕಿತ್ತೂರಿನಲ್ಲಿ ಕಂಠಪೂರ್ತಿ ಕುಡಿಸಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ಸರ್ವಿಸ್ ರಸ್ತೆ ಬಳಿ ಕರೆದೊಯ್ದು ಕಾಲಿನಿಂದ ಗುಪ್ತಾಂಗಕ್ಕೆ ಒದ್ದು ರಮೇಶ್ ನನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ.

ಹತ್ಯೆ ಬಳಿಕ ಶ್ರೀದೇವಿಗೆ ಫೋನ್ ಮಾಡಿ ತಿಳಿಸಿದ್ದ ಆರೋಪಿ ತನ್ನ ಊರಾದ ಧಾರವಾಡಕ್ಕೆ ತೆರಳಿದ್ದ. ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇದೀಗ ರಮೇಶ್ ಪತ್ನಿ ಶ್ರೀದೇವಿ ಹಾಗೂ ಬಸವರಾಜ್ ಇಬ್ಬರನ್ನು ಬಂಧಿಸಿದ್ದಾರೆ.
ಸಿಎಂ ಮನೆಗೆ ಭದ್ರತೆಗಿದ್ದ ಪೊಲೀಸರಿಂದಲೇ ಗಾಂಜಾ ಡೀಲ್; ಇಬ್ಬರು ಕಾನ್ಸ್ ಟೇಬಲ್ ಗಳು ಅರೆಸ್ಟ್

Related Articles

Back to top button