Latest

ಸಿಎಂ ಮನೆಗೆ ಭದ್ರತೆಗಿದ್ದ ಪೊಲೀಸರಿಂದಲೇ ಗಾಂಜಾ ಡೀಲ್; ಇಬ್ಬರು ಕಾನ್ಸ್ ಟೇಬಲ್ ಗಳು ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲಿಸ್ ಸಿಬ್ಬಂದಿಗಳೇ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಸಿಎಂ ಬೊಮ್ಮಾಯಿ ನಿವಾಸದ ಭದ್ರತಾ ಕಾರ್ಯದಲ್ಲಿದ್ದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳು ಕುಖ್ಯಾತ ಪೆಡ್ಲರ್ ಗಳಿಂದ ಗಾಂಜಾ ತರಿಸಿಕೊಂದು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಇದೀಗ ಆರ್.ಟಿ.ನಗರ ಪೊಲೀಸರು ಇಬ್ಬರು ಕಾನ್ಸ್ ಟೇಬಲ್ ಗಳನ್ನು ಬಂಧಿಸಿದ್ದಾರೆ.

Home add -Advt

ಬಂಧಿತರು ಕೋರಮಂಗಲ ಪೊಲೀಸ್ ಠಾಣಾ ಸಿಬ್ಬಂದಿ ಶಿವಕುಮಾರ್ ಹಾಗೂ ಸಂತೋಷ್ ಎಂದು ತಿಳಿದುಬಂದಿದೆ. ಇಬ್ಬರೂ ಮೋಸ್ಟ್ ವಾಂಟೆಡ್ ಪೆಡ್ಲರ್ ಗಳಿಂದ ಗಾಂಜಾ ಖರೀದಿಸಿ, ಮಾರಾಟ ಮಾಡುತ್ತಿದ್ದರು. ಸಿಎಂ ಮನೆಯ ಬಳಿಯ ಆರ್.ಟಿ.ನಗರದ 80 ಅಡಿ ರಸ್ತೆ ಬಳಿ ಡೀಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ತನಿಖೆ ಮುಂದುವರೆದಿದೆ.
ಋಷಿಕುಮಾರ ಸ್ವಾಮಿಜಿ ವಶಕ್ಕೆ ಪಡೆದ ಪೊಲೀಸರು

Related Articles

Back to top button