
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶುಕ್ರವಾರ ೮೭ ಕೊರೋನಾ ವರದಿಗಳು ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿಯೆ ಇಂದು ಒಂದೇ ದಿನದಲ್ಲಿ ಹಾಪ್ ಸೆಂಚುರಿ ಸಮೀಪಿಸಿದ್ದು, ನಗರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಂದೇ ದಿನ ೪೭ ಕ್ಕೆ ಬಂದು ತಲುಪಿದೆ.
ಗ್ರಾಮೀಣ ಪ್ರದೇಶ ಅಂಕಲಗಿಯಲ್ಲಿ ೧೮ ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಮೂಡಲಗಿ ನಗರದಲ್ಲಿ ೫, ಕೊಣ್ಣೂರ ೫, ಸುಣದೋಳಿ ೨ ಮತ್ತು ಶಿಂಧಿಕುರಬೇಟ್, ಮಲ್ಲಾಪುರ ಪಿ.ಜಿ. ಘಟಪ್ರಭಾ, ಅಡಿಬಟ್ಟಿ, ಮಸಗುಪ್ಪಿ, ಉರುಬಿನಹಟ್ಟಿ, ಯಾದವಾಡ, ಮಮದಾಪುರ, ನಾಗನೂರ ಮತ್ತು ಹುಣಶ್ಯಾಳದಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ ಎಂದು ಡಾ. ಜಿಂಗಿ ಮಾಹಿತಿ ನೀಡಿದ್ದಾರೆ.