Latest

9 ಕಚೇರಿ ಉಕಕ್ಕೆ: ಗೆಜೆಟ್ ಪ್ರಕಟ, ಬೆಳಗಾವಿಗೆ ಸಿಕ್ಕಿದ್ದು ಮೂರು

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಉತ್ತರ ಕರ್ನಾಟಕಕ್ಕೆ 9 ಕಚೇರಿ ಸ್ಥಳಾಂತರ ಸಂಬಂಧ ಗೆಟ್ ನೋಟಿಫಿಕೇಶನ್ ಪ್ರಕಟವಾಗಿದ್ದು, ಇದರಲ್ಲಿ ಬೆಳಗಾವಿಗೆ ಮೂರು ಕಚೇರಿ ಮಾತ್ರ ಸಿಕ್ಕಿದೆ.

ಕೃಷ್ಣಾ ಭಾಗ್ಯ ಜಲನಿಗಮ ಆಲಮಟ್ಟಿಗೆ, ಕರ್ನಾಟಕ ನೀರಾವರಿ ನಿಗಮ ದಾವಣಗೆರೆಗೆ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಬೆಳಗಾವಿಗೆ, ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ ಬೆಳಗಾವಿಗೆ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಿ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಕಚೇರಿ ಹುಬ್ಬಳ್ಳಿಗೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರ ಕಚೇರಿ ಹಂಪಿಗೆ, ಮಾನವಹಕ್ಕುಗಳ ಆಯೋಗದ ಸದಸ್ಯರ ಪೈಕಿ ಒಬ್ಬ ಸದಸ್ಯರ ಕಚೇರಿ ಧಾರವಾಡಕ್ಕೆ, ಕರ್ನಾಟಕ ರಾಜ್ಯ ಮಾಹಿತಿ ಆೋಗದ ಆಯುಕ್ತರ ಪೈಕಿ ಒಂದು ಗುಲಬರ್ಗಾ ಮತ್ತೊಂದು ಬೆಳಗಾವಿಗೆ ಹಾಗೂ ಕರ್ನಾಟಕ ಉಪ ಲೋಕಾಯುಕ್ತರ ಪೈಕಿ ಒಂದು ಉಪ ಲೋಕಾಯುಕ್ತರ ಕಚೇರಿ ಧಾರವಾಡಕ್ಕೆ ಸ್ಥಳಾಂತರವಾಗಲಿದೆ. 

ಜನೆವರಿ 10ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಆದರೆ ಈ ಕಚೇರಿಗಳು ಯಾವಾಗ ಕಾರ್ಯಾರಂಭ ಮಾಡಲಿವೆ ಎನ್ನುವ ಬಗ್ಗೆ ಪ್ರಸ್ತಾಪವಿಲ್ಲ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button