Kannada News

ಬೆಳಗಾವಿಯಲ್ಲಿ ಇಂದು 95 ಜನರಿಗೆ ಸೋಂಕು, 4 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಳಗಾವಿಯಲ್ಲಿ 95 ಜನರಿಗೆ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ 115 ಜನರು, ಬೆಳಗಾವಿಯಲ್ಲಿ 4 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ 2208, ಧಾರವಾಡದಲ್ಲಿ 157, ಬಳ್ಳಾರಿ 133, ವಿಜಯಪುರ 118, ಮೈಸೂರು 93, ಕಲಬುರಗಿ 89, ಉಡುಪಿ 80, ಉತ್ತರ ಕನ್ನಡ 75 ಜನರಿಗೆ ಸೋಂಕು ಪತ್ತೆಯಾಗಿದೆ.

ಬೀದರ್ 69, ಗದಗ 59, ಹಾವೇರಿ 58, ಕೋಲಾರ 51, ದಕ್ಷಿಣ ಕನ್ನಡ 39, ತುಮಕೂರು 36, ರಾಯಚೂರು, ಬೆಂಗಳೂರು ಗ್ರಾಮಾಂತರ 33, ದಾವಣಗೆರೆ, ಚಿಕ್ಕಬಳ್ಳಾಪುರ 31, ಕೊಪ್ಪಳ್ಳ 30, ಬಾಗಲಕೋಟೆ 29, ಚಿಕ್ಕಮಗಳೂರು 28, ಚಿತ್ರದುರ್ಗ 24, ಮಂಡ್ಯ 22, ಹಾಸನ 21, ರಾಮನಗರ 14, ಕೊಡಗು 13, ಶಿವಮೊಗ್ಗ, ಚಾಮರಾಜನಗರ 10, ಯಾದಗಿರಿಯಲ್ಲಿ 4 ಜನರಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟೂ 55,115 ಜನರಿಗೆ ಸೋಂಕು ದೃಢಪಟ್ಟಿದೆ. ಇಂದು 1028 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 20, 757 ಜನರು ಗುಣಮುಖರಾಗಿದ್ದಾರೆ. ಇನ್ನೂ 33,205 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 115 ಜನರು ಸೇರಿ ಒಟ್ಟೂ 1147 ಜನರು ಕರ್ನಾಟಕದಲ್ಲಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 96306 ಜನರ ಮೇಲೆ ನಿಗಾಇಡಲಾಗಿದೆ.

ಇಂದು ಬೆಂಗಳೂರಿನಲ್ಲಿ 75, ಧಾರವಾಡದಲ್ಲಿ 8, ಮೈಸೂರಿನಲ್ಲಿ 7, ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 3, ಉಡುಪಿಯಲ್ಲಿ 3 ಜನರು ಸಾವಿಗೀಡಾಗಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ –

ರಾಜ್ಯದಲ್ಲಿ 3,693 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button