Latest

*ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಹೈಸ್ಕೂಲ್ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಸಣ್ಣಪುಟ್ಟ ಕಾರಣಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಮಾಡುತ್ತಿರುವುದು ದುರಂತ. ಇಲ್ಲೋರ್ವ ಹೈಸ್ಕೂಲು ವಿದ್ಯಾರ್ಥಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಮುಲಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

9ನೇ ತರಗತಿ ವಿದ್ಯಾರ್ಥಿ ಉದಯ್ ಕುಮಾರ್ ಆತ್ಮಹತ್ಯೆ ಮಡಿಕೊಂಡಾತ. ತಾತಿಕಲ್ ಗ್ರಾಮದ ಸರ್ಕಾರಿ ಆದರ್ಶ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಉದಯ್ ಗೆ ತಂದೆ-ತಾಯಿಗಳು ಬುದ್ಧಿವಾದ ಹೆಳಿದ್ದರಂತೆ. ಇದಕ್ಕೆ ಮನನೊಂದ ಉದಯ್ ವಿಷಸೇವಿಸಿದ್ದಾನೆ.

ಗಂಭೀರ ಸ್ಥಿತಿ ತಲುಪಿದ್ದ ಉದಯ್ ನನ್ನು ಕೋಲಾರದಿಮ್ದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉದಯ್, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

*ಶಿಕ್ಷಕನ ಮಗನನ್ನೇ ಅಪಹರಿಸಿದ ದುಷ್ಕರ್ಮಿಗಳು; ಇಬ್ಬರು ಅರೆಸ್ಟ್*

 

https://pragati.taskdun.com/10years-boy-kidnap-casekalaburgitwo-accused-arrested/

Related Articles

Back to top button