ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಳಿಕ ಮುಂದೇನು ಎನ್ನುವ ಪ್ರಶ್ನೆಯೊಂದಿಗೆ, ಮೂಲೆಗುಂಪಾಗಿಬಿಡುತ್ತಾರಾ ಯಡಿಯೂರಪ್ಪ ಎನ್ನುವ ಅನುಮಾನಕ್ಕೆ ಉತ್ತರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ ನಂತರದ ಸ್ಥಾನದಲ್ಲಿ ಯಡಿಯೂರಪ್ಪ ಅವರು ಸೇರಿಸಲ್ಪಟ್ಟಿದ್ದಾರೆ. 2023ರ ವಿಧಾನ ಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಗೆ ಯಡಿಯೂರಪ್ಪ ಅತ್ಯಂತ ಪ್ರಮುಖ, ನಿರ್ಣಾಯಕ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲ್ಪಡುತ್ತಿದ್ದಂತೆ ಯಡಿಯೂರಪ್ಪ ಅವರ ಮಹತ್ವ ಮುಗಿದುಹೋಯಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಅನೇಕ ಮಂತ್ರಿಗಳು, ಶಾಸಕರು, ಕಾರ್ಯಕರ್ತರು ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ್ದರು. ಅನೇಕರು ಅವರಿಂದ ದೂರವಾಗಿದ್ದರು.
ಆದರೆ ಬುಧವಾರ ಯಡಿಯೂರಪ್ಪ ಅನರನ್ನು ಸಂಸದೀಯ ಮಂಡಳಿಗೆ ಸೇರಿಸಲಾಗಿದೆ ಎನ್ನುವ ಸುದ್ದಿ ಪ್ರಕಟವಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಸಂಚಲನ ಮೂಡಿತು. ಭಾರತೀಯ ಜನತಾಪಾರ್ಟಿಯಲ್ಲಿ ಹೊಸ ಉತ್ಸಾಹ ಮೂಡಿತು. ಯಡಿಯೂರಪ್ಪ ಅವರಿಂದ ದೂರವಾಗಿದ್ದವರೆಲ್ಲರ ಮೈಯಲ್ಲಿ ವಿದ್ಯುತ್ ಸಂಚಲನವಾದಂತಾಯಿತು.
ಬುಧವಾರ ಮಧ್ಯಾಹ್ನದಿಂದ ದಿಢೀರ್ ಆಗಿ ಯಡಿಯೂರಪ್ಪ ನಿವಾಸ ಮತ್ತೊಮ್ಮೆ ಶಕ್ತಿ ಕೇಂದ್ರವಾಗಿ ಬದಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಹಿಡಿದು ಮಂತ್ರಿಗಳು, ಗಣ್ಯಾತಿ ಗಣ್ಯರೆಲ್ಲ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಅಭಿನಂಧಿಸುವ ಕೆಲಸ ಮಾಡಿದರು. ಗುರುವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಕೂಡ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಅಭಿನಂದಿಸಿದರು. ರಾಜ್ಯದ ಎಲ್ಲೆಡೆಯಿಂದ ಶಾಸಕರು, ಕಾರ್ಯಕರ್ತರು ಯಡಿಯೂರಪ್ಪ ಮನೆಗೆ ಧಾವಿಸಿದರು.
ಕಳೆದ ಕೆಲವು ದಿನಗಳಿಂದ ಒಂದು ರೀತಿಯಲ್ಲಿ ಕಳಾಹೀನವಾಗಿದ್ದ ಬಿಜೆಪಿ ಇದೀಗ ಮೈ ಕೊಡವಿ ನಿಂತಿದೆ. ಅನೇಕ ಕಾರ್ಯಕರ್ತರಲ್ಲಿ ಮೂಡಿದ್ದ ನಿರಾಸೆಯ ಕಾರ್ಮೋಡ ಸರಿದಿದೆ. ಬೆಳಕು ಕಾಣತೊಡಗಿದೆ. ಯಡಿಯೂರಪ್ಪ ಅವರಿಗೆ ಅಭ್ಯರ್ಥಿಗಳ ಆಯ್ಕೆಯ ಅಧಿಕಾರ ಮತ್ತು ಚುನಾವಣೆಯ ನೇತೃತ್ವ ನೀಡಿದ್ದರಿಂದ 2023ರ ಚುನಾವಣೆಗೆ ಭರದ ಸಿದ್ಧತೆ ಶುರುವಾಗಿದೆ. ನಾಳೆಯಿಂದಲೇ 4 ತಂಡಗಳಾಗಿ ರಾಜ್ಯಪ್ರವಾಸ ಕೈಗೊಳ್ಳುವ ನಿರ್ಣಯವಾಗಿದೆ.
https://pragati.taskdun.com/latest/bjp-bsyediyurappa-central-parliamentary-board-cmbasavrajbommati-wish/
https://pragati.taskdun.com/latest/b-s-yedyurappacm-basavaraj-bommaimeetshikaripuraclarification/
https://pragati.taskdun.com/karnataka-news/cd-case-rs-100-crore-worth-rs-thought-for-defamation-suit-balachandra-zarakihili/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ