Latest

ಇನ್ನು ಮುಂದೆ ಟ್ವೀಟ್ ಮಾಡುವಾಗ ಎಡವಟ್ಟಾದರೆ ಭಯಪಡಬೇಕಿಲ್ಲ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇನ್ನು ಮುಂದೆ ಟ್ವೀಟ್ ಮಾಡಿದ ಮೇಲೆ ಎಡವಟ್ಟಾಗಿದೆ ಎಂಬುದು ಗಮನಕ್ಕೆ ಬಂದರೆ ಭಯಪಡಬೇಕಿಲ್ಲ. ಅದಕ್ಕೂ ಹೊಸ ಪರಿಹಾರೋಪಾಯವೊಂದನ್ನು ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟ್ಟರ್ ಪರಿಹಾರೋಪಾಯ ಕಲ್ಪಿಸಿದೆ.

ಟ್ವಿಟ್ಟರ್ ಬ್ಲೂ ಇದಕ್ಕಾಗೇ ಎಡಿಟ್ ಬಟನ್ ಒಂದನ್ನು ಸಿದ್ಧಪಡಿಸಿದ್ದು ಮುಂದಿನ ವಾರದಲ್ಲಿ ಇದನ್ನು ಪರಿಚಯಿಸಲಾಗುತ್ತಿದೆ. ಈ ಕುರಿತು ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಈವರೆಗೆ ಟ್ವೀಟ್ ಮಾಡಿದ ಮೇಲೆ ಅದನ್ನು ಸರಿಪಡಿಸಲು ಸಾಧ್ಯವಿರಲಿಲ್ಲ. ಅದಕ್ಕಾಗಿ ಬೇರೆಯದೇ ಟ್ವೀಟ್ ಮಾಡಬೇಕಿತ್ತು. ಇದೀಗ ಪರಿಚಯಿಸಲಾಗುತ್ತಿರುವ ಬಟನ್ ಮೂಲಕ ಟ್ವೀಟ್ ಮಾಡಿದ 30 ನಿಮಿಷಗಳಲ್ಲಿ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಇದರಿಂದ ಬದಲಾವಣೆಯಾದ ಟ್ವೀಟ್ ಜೊತೆ ಮೂಲ ಟ್ವೀಟ್ ಏನಿತ್ತು ಎಂಬುದನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಜಗತ್ತಿನಾದ್ಯಂತ 32 ಕೋಟಿಗೂ ಅಧಿಕ ಜನ ಟ್ವಿಟ್ಟರ್ ಬಳಕೆದಾರರಿದ್ದು ಹೆಚ್ಚಿನವರು ಇಂಥದ್ದೊಂದು ಫೀಚರ್ ಪರಿಚಯಿಸಲು ವ್ಯಾಪಕ ಒತ್ತಾಯಗಳಿದ್ದವು. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಇದನ್ನು ಅಭಿವೃದ್ಧಿಪಡಿಸಿದೆ.

ಭೀಕರ ಬರಗಾಲ, ಹವಾಮಾನ ವೈಪರೀತ್ಯ: ವನ್ಯಜೀವಿಗಳು ಎತ್ತಂಗಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button