Latest

ಎದೆನೋವಿನಿಂದ ಕಾರಾಗೃಹದಲ್ಲಿ ಕುಸಿದುಬಿದ್ದ ಮುರುಘಾಶ್ರೀ

ಚಿತ್ರದುರ್ಗ: ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ತೀವ್ರ ಎದೆನೋವಿನಿಂದ ಕಾರಾಗೃಹದಲ್ಲಿಯೇ ಕುಸಿದು ಬಿದ್ದ ಘಟನೆ ನಡೆದಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿನ್ನೆ ರಾತ್ರಿ ಬಂಧಿಸಲ್ಪಟ್ಟಿರುವ ಮುರುಘಾಶ್ರೀಗಳು ರಾತ್ರಿಯಿಡಿ ಚಿತ್ರದುರ್ಗ ಕಾರಾಗೃಹದಲ್ಲಿ ಕಳೆದಿದ್ದಾರೆ. ಆದರೆ ಇಂದು ಬೆಳಿಗ್ಗೆ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಜೈಲಿನ ಸಿಬ್ಬಂದಿಗಳಿಗೆ ಗೊತ್ತಾಗುತ್ತಿದ್ದಂತೆ ಜೈಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಔಷಧಿ ನೀಡಲಾಗಿದೆ.

Home add -Advt

ಆದರೆ ಶ್ರೀಗಳಿಗೆ ಎದೆನೋವು ಕಡಿಮೆಯಾಗಿಲ್ಲ. ಇದ್ದಕ್ಕಿದ್ದಂತೆ ಕಾರಾಗೃಹದಲ್ಲೇ ಶ್ರೀಗಳು ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಾರಾಗೃಹದಿಂದ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದೆ.

https://pragati.taskdun.com/karnataka-news/14-days-judicial-custody-for-mr-muruga-shree-sent-to-district-jail/

Related Articles

Back to top button