Kannada NewsLatest

ಸಾವರ್ಕರ್ ಭಾವಚಿತ್ರದ 10 ಸಾವಿರ ಟಿಶರ್ಟ್ ಹಂಚಿಕೆ: ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಳಗಾವಿ ನಗರದ ಉತ್ತರ ಮತಕ್ಷೇತ್ರದಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಗಣೇಶ ಮಂಡಳಿಗಳಿಗೆ ವೀರ್ ಸಾವರ್‌ಕರ್ ಭಾವಚಿತ್ರ, ಬ್ಯಾನರ್, ಟಿ ಶರ್ಟ್ ಗಳನ್ನು ಶಾಸಕ ಅನಿಲ್ ಬೆನಕೆ ವಿತರಣೆ ಮಾಡಿ ಅದ್ಧೂರಿಯಿಂದ ಗಣೇಶೊತ್ಸವ ಆಚರಣೆ ಮಾಡುವಂತೆ ತಿಳಿಸಿದರು.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಗಣೇಶನನ್ನು ಕೂಡ್ರಿಸಿರುವ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿ ಕ್ರಾಂತಿ ವೀರ ಸಾವರ್‌ಕರ್ ಭಾವಚಿತ್ರ, ಹಾರ, ಟಿ ಶರ್ಟ್ ಹಾಗೂ ಬ್ಯಾನರ್‌ಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಚವ್ಹಾಟ್‌ಗಲ್ಲಿಯಲ್ಲಿರುವ ನಾನಾ ಪಾಟೀಲ್ ಚೌಕ್‌ದಲ್ಲಿರುವ ಗಣೇಶ ಮಂಡಳಕ್ಕೆ ಸಾವರ್‌ಕರ್ ಹಾಗೂ ತಿಲಕ್‌ರ ಭಾವಚಿತ್ರ ಹಾಗೂ ಬ್ಯಾನರ್‌ಗಳನ್ನು ಹಸ್ತಾಂತರಿಸಿ ಪೂಜೆಯನ್ನು ಸಲ್ಲಿಸಲಾಯಿತು.

ಬೆಳಗಾವಿಯ ಉತ್ತರ ಮತಕ್ಷೇತ್ರದಲ್ಲಿ ಸಾರ್ವಜನಿಕ ಉತ್ಸವ ಮಂಡಳಗಳಿಗೆ ಸಾವರ್‌ಕರ್ ಹಾಗೂ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭ ಮಾಡಿದ ತಿಲಕ್‌ರ ಭಾವಚಿತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಸಾವರ್‌ಕರ್ ಭಾವಚಿತ್ರವನ್ನು ಹೊಂದಿರುವ ಸುಮಾರು 10 ಸಾವಿರ ಟೀ ಶರ್ಟ್ ಗಳನ್ನು ಹಂಚುತ್ತಿದ್ದೇವೆ. ದೇಶದಲ್ಲಿ ಮುಂಬೈ ನಂತರ ಬೆಳಗಾವಿಯಲ್ಲಿ ಗಣೇಶೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ದಕ್ಷಿಣಭಾರತದಲ್ಲಿ ಬೆಳಗಾವಿ ಶಹರದಲ್ಲಿ ಮೊದಲ ಬಾರಿಗೆ ಅದ್ಧೂರಿ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈಗಾಗಲೇ ಬೆಳಗಾವಿಯ ಗಣೇಶೋತ್ಸವಕ್ಕೆ 126 ವರ್ಷಗಳಾಗಿದೆ. ಈ ರೀತಿ ದೊಡ್ಡ ಪ್ರಮಾಣದಲ್ಲಿ ಗಣೇಶೋತ್ಸವ ಮಾಡುವುದು ನಮಗೆಲ್ಲ ಹೆಮ್ಮೆಯ ಸಂಗತಿ. 200 ಸಾವರ್‌ಕರ್ ಫೋಟೋ ಹಾಗೂ 10 ಸಾವಿರ ಟೀ ಶರ್ಟ್, ಹಾಗೂ ಬ್ಯಾನರ್‌ಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬ ಮಾಡಲು ಆಗುವುದಿಲ್ಲ. ಕೆಲವು ಸಮಯ ಅನುಮತಿಯ ಅವಶ್ಯಕತೆ ಇರೋದಿಲ್ಲ. ಬೇರೆಯವರಿಗೆ ಯಾಕೆ ಇವರು ಕಾಯ್ದೆಗಳನ್ನು ಹಾಕೋದಿಲ್ಲ. ನಮಗಷ್ಟೇ ಯಾಕೆ ಕಾಯ್ದೆಗಳನ್ನು ಹಾಕುತ್ತಾರೆ. ಎಲ್ಲದಕ್ಕೂ ಅನುಮತಿ ತೆಗೆದುಕೊಳ್ಳಬೇಕೆಂದರೆ ಹಬ್ಬಗಳನ್ನು ಯಾಕೆ ಮಾಡಬೇಕೆಂದು ಎಂದು ಪ್ರಶ್ನಿಸಿದರು. ನಮಗೆ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಇದಕ್ಕೆ ಯಾರೂ ಅಡೆ ತಡೆ ಮಾಡುವ ಅವಶ್ಯಕತೆಯಿಲ್ಲ. ಈಗಾಗಲೇ ಎಲ್ಲಾ ಗಣೇಶ ಮಂಡಳಗಳು ನಿರ್ಧಾರವನ್ನು ಮಾಡಿದ್ದು. ಅದ್ಧೂರಿ ಗಣೇಶೋತ್ಸವ ಆಚರಣೆ ಮಾಡೇ ಮಡುತ್ತೇವೆ ಎಂದರು.

ಒಟ್ಟಾರೆ ಬೆಳಗಾವಿಯಲ್ಲಿ ಗಣೇಶ ಮಂಡಳಿಗಳಿಗೆ ಸಾವರ್‌ಕರ್‌ರವರ ಭಾವಚಿತ್ರ, ಬ್ಯಾನರ್ ಹಂಚುವ ಕಾರ್ಯ ಭರದಿಂದ ಸಾಗಿದೆ. ಒಟ್ಟಾರೆ ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ ನಡೆಯಲಿ ಎನ್ನುವುದು ಎಲ್ಲರ ಆಶಯ.

ಸಾಯಿಬಾಬಾ ಅವತಾರವೆಂದು ಸ್ವಯಂಘೋಷಿತ ದೇವ ಮಾನವನಿಂದ ಭಕ್ತರಿಗೆ ವಂಚನೆ

https://pragati.taskdun.com/latest/fake-babaescapecheatingramanagara/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button