Latest

ಗಂಗಾ ನದಿಯಲ್ಲಿ ಬೋಟ್ ಮುಳುಗಡೆ; 15 ಜನರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಗಂಗಾನದಿಯಲ್ಲಿ ಬೋಟ್ ಮುಳುಗಡೆಯಾಗಿ 15 ಜನರು ನಾಪತ್ತೆಯಾಗಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ದಾನಾಪುರ ಶಹಾಪುರ ಬಳಿ ನಡೆದಿದೆ.

55 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಗಂಗಾನದಿಯಲ್ಲಿ ಮುಳುಗಿದೆ. 15 ಜನರು ನಾಪತ್ತೆಯಾಗಿದ್ದು, ಉಳಿದವರು ನದಿಯಲ್ಲಿ ಈಜಿ ದಡ ಸೇರಿದ್ದಾರೆ.

Home add -Advt

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಕೆಲ ಕೂಲಿ ಕಾರ್ಮಿಕರು ಬೋಟ್ ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಎನ್ ಡಿ ಆರ್ ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್ ಡಿಎಂ ಡಣಾಪುರ ತಿಳಿಸಿದ್ದಾರೆ.

Breaking News – ಮುರುಘಾಶ್ರೀ 9 ದಿನಗಳ ಕಾಲ ನ್ಯಾಯಂಗ ಬಂಧನಕ್ಕೆ

https://pragati.taskdun.com/latest/murughashreebail-hearingjudicial-custody/

Related Articles

Back to top button